ಮಲೇಶಿಯಾ ಪ್ರವಾಸ

ಬೆಳಿಗ್ಗೆ 7.30 ಘಂಟೆಗೆ ಬೆಂಗಳೂರಿನ ಜಯನಗರದಲ್ಲಿ ಬಸ್ ಇಳಿದಾಗ, BTM layout ಗೆ ಹೋಗೋಕೆ 100 ರೂಪಾಯಿ ಕೊಟ್ರೆ ಬರ್ತೀನಿ, 120 ರೂಪಾಯಿ ಕೊಟ್ರೆ ಬರ್ತೀನಿ ಅಂತ ಬಸ್ ಹತ್ರ ನಿಂತು ಕೇಳ್ತಾ ಇದ್ದ ಆಟೋದವರ ನೆನಪು ಬಂದಿದ್ದು ನಾವು ಮಲೇಶಿಯಾಗೆ ಹೋದಾಗ. 2 ತಿಂಗಳ ಹಿಂದೆ ನಾವು ಪ್ರವಾಸಕ್ಕೆ ಅಂತ ಮಲೇಶಿಯಾದ ರಾಜಧಾನಿ kuala lumpur ಗೆ ಹೋಗಿದ್ದೆವು. ಬೆಳಿಗ್ಗೆ ಹೋಗಿ ಅಲ್ಲಿನ Airport ನಿಂದ ಹೊರಗೆ ಬಂದು ನಾವು ಬುಕ್ ಮಾಡಿದ್ದ ಹೊಟೆಲ್ ಗೆ ಹೋಗುವುದಕ್ಕೆ ಅಂತ ಟ್ಯಾಕ್ಸಿ ಕೇಳಿದ್ರೆ ಒಬ್ಬ 120 ರಿಂಗೇಟ್ಸ್ ( ಮಲೇಶಿಯಾದ ಕರೆನ್ಸಿ) ಕೊಡಿ ಅಂದ್ರೆ ಇನ್ನೊಬ್ಬ 100 ಅಂದ. ಹೀಗೆ ಮನಸ್ಸಿಗೆ ಬಂದಷ್ಟು ದುಡ್ಡು ಕೆಳೋರೆ ಹೊರತು ಮೀಟರ್ ಹಾಕುವವರ ಮಾತೇ ಇಲ್ಲ. ಅದರಲ್ಲೂ ನಾವು ಬೇರೆ ಪ್ರದೇಶದವರು, ಹೊಸದಾಗಿ ಅಲ್ಲಿ ಹೋದವರು ಅಂತ ತಿಳಿದರಂತು ಒಬ್ಬೊಬ್ಬರು ಒಂದೊಂದು ರೇಟ್ ಹೇಳುವವರೇ. ಈ ಹಾಡು ನಾವು ತಿರುಗಿ ಬರುವುದಕ್ಕೆಂದು ಏರ್‌ಪೋರ್ಟ್‌ಗೆ ಹೋಗುವವರೆಗೂ ಇತ್ತು. ಆ ವಿಷಯ ಹಾಗಿರಲಿ, ನಾನು ಇಲ್ಲಿ ಹೇಳುವುದಕ್ಕೆ ಹೊರಟಿರುವುದು ನಾವು ನೋಡಿದ ಸ್ಥಳಗಳ ಬಗ್ಗೆ.

kuala lumpur ದ genting highland, Bathu caves, Petronas twin tower ಇವು ಮೂರು ಮುಖ್ಯ ಪ್ರವಾಸಿ ಸ್ಥಳಗಳು.

ನಮ್ಮ ಉುಟಿ ಯ ಹಾಗೆ ಎತ್ತರದ ಪ್ರದೇಶ, ಹೋಗುವಾಗ ಮಂಜು ಕವಿದು ರಸ್ತೆಯೇ ಕಾಣದಂತಿರುವ ದೃಶ್ಯ, ಮಧ್ಯಾಹ್ನವೇ ಚಳಿಯ ಅನುಭವ. ಅಲ್ಲಿ ನಮ್ಮ ವಂಡರ್ ಲಾ ದ ಹಾಗೆ ಆದರೆ ಅದಕ್ಕಿಂತಲೂ ದೊಡ್ಡದಾದ ಒಂದು ಅಮ್ಯೂಸ್ಮೆಂಟ್ ಪಾರ್ಕ್. ಅಲ್ಲಿ ವಿಧ ವಿಧದ ಆಟಗಳು, ಷೋಗಳು, ದೃಶ್ಯಗಳು….ಒಟ್ಟಾರೆ ಒಂದು ದಿನ ಪೂರ್ತಿ ಅಲ್ಲಿ ಕಳೆದರು ನೋಡಿ, ಅನುಭವಿಸಿ ಮುಗಿಯದಿರುವಂತಹ ಸ್ಥಳ. ಅಲ್ಲಿನ ಕೆಲವು ಚಿತ್ರಗಳು ನಿಮಗಾಗಿ…
theme-2
theme-3
theme-41
dscn09692

ನಮ್ಮ ಮುಂದಿನ ಪಯಣ Petronas Twin Tower ನ ಕಡೆಗೆ. ಸರ್ಕಾರದ ಮತ್ತು ಇತರ ಕೆಲವು ಕಂಪನಿಗಳ ಸಹಾಯದೊಂದಿಗೆ Petronas ಕಂಪನಿ ಇದನ್ನು 1992 ರಿಂದ 1998 ರವರೆಗೆ ನಿರ್ಮಾಣ ಮಾಡಿತು. 88 ಅಂತಸ್ತುಗಳ ಎತ್ತರವಿರುವ ಈ ಅದ್ಭುತ ಜೋಡಿ ಕಟ್ಟಡಗಳ ಮಧ್ಯೆ 41ನೆಯ ಅಂತಸ್ತಿನಲ್ಲಿ ಒಂದು over bridge ಕಟ್ಟಲಾಗಿದೆ. ಈ ಕಟ್ಟಡದ ಅಂತಸ್ತುಗಳಲ್ಲಿ ಹಲವು ಪ್ರಮುಖ ಕಂಪನಿಗಳು ತಮ್ಮ office branch ಹೊಂದಿವೆ. 41ನೆಯ ಅಂತಸ್ತುಗಳವರೆಗೆ ಹೋಗಿ, ಆ ಅದ್ಭುತ ಸೌಂದರ್ಯವನ್ನು ಸವಿಯುವ ಅವಕಾಶ ಸಾರ್ವಜನಿಕರಿಗೆ ಇದೆ. Glass, steel, concrete ಇವುಗಳನ್ನು ಉಪಯೋಗಿಸಿ ಈ ಅದ್ಭುತ ಕಟ್ಟಡದ ನಿರ್ಮಾಣ ಮಾಡಲಾಗಿದೆ. ಆ ಸುಂದರ ಕಟ್ಟಡಗಳ ಮತ್ತು ಜಗತ್ತಿನ ಇನ್ನೂ ಹಲವು ಎತ್ತರದ ಕಟ್ಟಡಗಳ ಮಾಹಿತಿಯನ್ನು ಹೊಂದಿದ ಚಿತ್ರಗಳು ಇಲ್ಲಿವೆ.
dsc089691
dscn10572
dscn10332
dscn10462
dscn10482
dscn10472
dscn10492
dscn10502

ಕೊನೆಯದಾಗಿ ನಾವು ಭೇಟಿ ನೀಡಿದ ಸ್ಥಳ ಒಂದು ದೇವಸ್ಥಾನ. Bathu caves (god murugan temple) . ಇಲ್ಲಿನ ಗುಹೆಗಳು ಮತ್ತು ಮುರುಗ ( ಷಣ್ಮುಖ) ದೇವರು ಪ್ರಸಿದ್ಧ. ಅಲ್ಲಿನ ಒಂದು ಚಿತ್ರ ತಮ್ಮ ನೋಟಕ್ಕೆ.
dscn10652

ನಾವು ಪ್ರವಾಸ ಮುಗಿಸಿ ಬಂದು 2 ತಿಂಗಳುಗಳಾದರೂ ನಿನ್ನೆ ತಾನೇ ನೋಡಿ ಬಂದಂತೇ ಅನ್ನಿಸುತ್ತಿದೆ. ಆದ್ದರಿಂದ ಅಲ್ಲಿನ ನನ್ನ ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕು ಅನ್ನಿಸಿ ಈ ಬ್ಲಾಗನ್ನು ಬರೆಯುತ್ತಿದ್ದೇನೆ. ಅಲ್ಲಿನ ಮಾಹಿತಿ ಮತ್ತು ಚಿತ್ರಗನ್ನು ನೋಡಿ ನೀವೂ ಸಂತೋಷ ಪಡುತ್ತೀರಿ ಎಂದು ನನ್ನ ಮನಸ್ಸು ಹೇಳುತ್ತಿದೆ, ಸರಿನಾ……..

Published in: on ಏಪ್ರಿಲ್ 9, 2009 at 9:36 AM  Comments (9)  

The URI to TrackBack this entry is: https://ranjanahegde.wordpress.com/2009/04/09/%e0%b2%ae%e0%b2%b2%e0%b3%87%e0%b2%b6%e0%b2%bf%e0%b2%af%e0%b2%be-%e0%b2%aa%e0%b3%8d%e0%b2%b0%e0%b2%b5%e0%b2%be%e0%b2%b8/trackback/

RSS feed for comments on this post.

9 ಟಿಪ್ಪಣಿಗಳುನಿಮ್ಮ ಟಿಪ್ಪಣಿ ಬರೆಯಿರಿ

 1. Ranjitaaravare, nimma MaleShiya pravaasada bagge nanna abhipraaya. ollechitragalannu serehididideeri. AAdare evellavu ella mahanagaragaLalliyu kandubarabahudaada saamaanya drushya. eradu bahumahadigala naduvina samparka setuve bengaloorina ballari rasteyalli hoguvaaga kodigehalli gate emballi edagade nodi. Alli intaha kattadavannu nirmisi aagale 4-5 varshagale aayitu. Innu Amerikeya New yark nagaradalli ellavu 90-100 antastinavaregina gaganachumbigale. Empire State kattadada melehodare idi bruhat maaya nagari newyarkina vihangamanota kannige kaanisuvashtu dooraakke etukuttade. Adare hotte hasidaaga alli siguvudu beef, ham, begal ennuva vonakalu bannu chicken( lamb bahala costly) kudiyalagada chaha,vaasane chennagiddaru kudiyalaagada cofee. ivu videshadallina mahanagaragala vishEsha. Elliyadaru ondiShtu oggarane anna (chitraanna) sikkidare aaguvastu santosha,anubhavisidavarige gottu. Nammallu sarakaara anumati needidare antaha bahu mahadigala kattada naavu nodabahudu. nimma muraghan chitra tumba aakarShaka vaagide.
  nimma anubhava mattu anisikegalige abhinandenegalu.

  • ನನ್ನ ಬ್ಲಾಗ್ ನೋಡಿ ತಮ್ಮ ಅನಿಸಿಕೆ ಬರೆದಿದ್ದಕ್ಕೆ ಧನ್ಯವಾದಗಳು. ಕ್ಷಮಿಸಿ ನನ್ನ ಹೆಸರು ರಂಜನಾ. ಇನ್ನು ನನ್ನ ಮಲೇಶಿಯಾ ಪ್ರವಾಸದ ಬಗ್ಗೆ. Twin tower ಎಲ್ಲ ಮಹಾನಗರಗಳಲ್ಲೂ ಕಾಣ ಸಿಗುವ ಒಂದು ಸಾಮಾನ್ಯ ಕಟ್ಟದ ಅಲ್ಲ. 1998 ಇಂದ 2004 ರ್ ವರೆಗೆ ಜಗತ್ತಿನ ಎತ್ತರದ ಕಟ್ಟಡಗಳಲ್ಲೊಂದಾಗಿತ್ತು, ಈಗ ಜಗತ್ತಿನ ಎತ್ತರದ ಜೋಡಿ ಕಟ್ಟಡಗಳಲ್ಲೊಂದು . ಅದರ ವಿನ್ಯಾಸ, ಕಟ್ಟಿದ ರೀತಿ ಎಲ್ಲವೂ ಅದ್ಭುತವಾಗಿದೆ. ಅಲ್ಲಿ ಹೋಗಿ ನೋಡಿ ಬಂದರೆ ನಿಮಗೂ ಅದರ ಅನುಭವ ಆಗುತ್ತೆ. ಅದರ ಮಧ್ಯದ ಸೇತುವೆ ಬರೆ ಸಂಪರ್ಕಕ್ಕಾಗಿ ಕಟ್ಟಿದ್ದಲ್ಲ, ಜೊತೆಗೆ ಆ ಕಟ್ಟಡಗಳ ಭದ್ರತೆಗಾಗಿಯೂ ಕೂಡ. ನಾನು ನೋಡಿ ನನಗೆ ಅದ್ಭುತ ಅನ್ನಿಸಿದ್ದನ್ನು ಇಲ್ಲಿ ಬರೆದಿದ್ದೇನೆ…. ಇನ್ನೂ ಹೆಚ್ಚಿನ ಮಾಹಿತಿಗಾಗಿ http://en.wikipedia.org/wiki/Petronas_Twin_Towers ನೋಡಿ… ನಮ್ಮ ಉರಲ್ಲೂ ಇಂತಹ ಕಟ್ಟದಾಗ ನಿರ್ಮಾಣ ಮಾಡಬಹುದು ಅನ್ನುವ ನಿಮ್ಮ ಅನಿಸಿಕೆ ಸತ್ಯ. ಯಾವಾಗ ಅಗುತ್ತೋ ನೋಡೋಣ. ಅಲ್ಲಿಯ ಆಹಾರದ ಬಗ್ಗೆ ನೀವು ಹೇಳಿದ್ದು ಅಕ್ಷರಶಹ ನಿಜ. ನಾನಿಲ್ಲಿ ಕಳೆದ 1 ವರ್ಷದಿಂದ ಇದ್ದೇನೆ. ಎಲ್ಲ ಕಡೆಗೂ ನಾವು ತಿನ್ನುವಂತಹ, ಅದು ಸಸ್ಯಾಹಾರ ಸಿಗುವುದು ಕಷ್ಟ. ಮನೆಯಲ್ಲಿ ಅಡಿಗೆ ಮಾಡಿ ತಿನ್ನೋದೇ ಸುಖ ಅನ್ನಿಸುತ್ತದೆ (ಅನ್ನಿಸಿದೆ) 🙂 ಮುರುಗನ ವಿಗ್ರಹ ಬಹಳ ಸುಂದರವಾಗಿದೆ.ಹೀಗೇ ನನ್ನ ಬ್ಲಾಗ್ ಗೆ ಭೇಟಿ ಕೊಟ್ಟು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತೀರಿ ಅಂದು ಅಶಿಸಿದ್ದೇನೆ.

 2. photodalliye maleshiya torisiddakke dhanyavaadaglu..

  • ತುಂಬಾ ಧನ್ಯವಾದಗಳು ನನ್ನ ಚಿತ್ರಗಲ್ಲಿ ಮಲೇಶಿಯಾ ನೋಡಿದ್ದಕ್ಕೆ..ಮತ್ತೆ ಭೇಟಿ ಕೊಡುತ್ತಾ ಇರಿ ಇತರ ಪ್ರವಾಸಗಳು ಮತ್ತು ಅನುಭವಗಳನ್ನು ಹಂಚಿಕೊಳ್ಳೋಕೆ..

 3. ranjanaaravrige vandanegalu, nanna pratikriyayinda Besaravilla taane? naaneega amerikeayalliddene.. ideega virginiyadinda new jersyge hoguttiddene.illina saakashtu sundara taanagala chitravannu nanna maga mattu sose serehidididdare. kalisikoduttene. Nanage, Eneadaru nanna deshada bagge vyamoha. Adarallu namma karnaatakadantaha sundara naadu nanage mechhida sangati. namma “GOMMATESWARA” yaava prathimege kammiyidaane.(Liberty prathimige holisi). Namma chikkamagalurina sundara taanagalu yaavudakke kadimeyide. Nanu Gunakke maatsrrya paduvavanalla. Nijakku viswada ellede adbhtavaada, sundaravaada,vichitravaada sangatigalive. Adakke udaaharane endare virginiyaadalliruva LUREY CAVERN emba 150 adi aladalliruva 2maili uddada chitra vichitra guheye saakshi. Adara bagge chitra sahita barediddene.. adello hard disk nalli serei hogode. huduki kalisikoduttene.
  Dayavittu besarisabedi. vichaara vinimaya maadikollona. naanu mulabhootavaagi mysorinavanu. Adare malenaadu pradeshadalli baalyavannu kaleda nanage adara bagge vyamoha. Hechchaagi nanna jeevana Bengaloorinalli kaleyuttiruvudarinda naanu praayogikavaagi bengaloorina kannadiga. sorry ello horatu hode. matte bhettiyaagona.
  nimma hithaishi
  sampath sakaleshpura.

  • ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಸಂಪತ್ ಅವರೇ. ನಿಮ್ಮ ಕನ್ನಡಾಭಿಮಾನಕ್ಕೆ ನನ್ನ ಮೆಚ್ಚುಗೆ. ನಾನು ಕೂಡ ಅಪ್ಪಟ ಕನ್ನಡ ನಾಡಿನ ಅದರಲ್ಲೂ ಮಲೆನಾಡಿನ ಹುಡುಗಿ. ಹುಟ್ಟಿ ಬೆಳೆದಿದ್ದೆಲ್ಲ ಅಲ್ಲೇ. ಬೇಲೂರು, ಹಳೆಬೀಡು, ಶ್ರವಣಬೆಳಗೊಳ ಎಲ್ಲ ವೀಕ್ಷಿಸಿದ್ದೇನೆ. ಮತ್ತು ಮನಸಾರೇ ಅಸ್ವದಿಸಿದ್ದೆನೆ. ನಮ್ಮ ನಾಡಿನ ಬಗ್ಗೆ, ನಮ್ಮ ದೇಶದ ಬಗ್ಗೆ ನನಗು ಬಹಳ ಪ್ರೀತಿ ಮತ್ತು ಭಕ್ತಿ ಇದೆ. ಅದನ್ನು ನೀವು ನನ್ನ ಹಬ್ಬ ಎಂಬ ಬ್ಲಾಗ್ ನಲ್ಲಿ ಕಾಣಬಹುದು. ನಮ್ಮಮ್ಮ ತುಂಬಾ ಒಳ್ಳೆಯವರೇ ಆದರೆ ಬೇರೆಯವರ ಅಮ್ಮನು ಒಳ್ಳೆಯದಾಗಿ ಕಂಡರೆ ಒಳ್ಳೆಯವರು ಎನ್ನುವುದು ನನ್ನ ಭಾವನೆ. ಹಾಗೆಯೇ ನಮ್ಮ ದೇಶದ, ನಮ್ಮ ನಾಡಿನ ಸ್ಥಳಗಳಂತೆಯೇ ಬೇರೆ ದೇಶದ ಸ್ಥಳಗಳು ಇಷ್ಟವಾಗಿದ್ದನ್ನು ಚೆನ್ನಾಗಿದೆ ಅಂತ ಹೇಳುವುದು ನನ್ನ ಗುಣ. ನಾನು ಹೋದ ಸ್ಥಳ ನನಗೆ ಇಷ್ಟವಾಯಿತು, ಅದನ್ನು ನನ್ನ ಬ್ಲಾಗ್‍ನ ಮೂಲಕ ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಬೇಕೆನಿಸಿತು, ಬರೆದೆ ಅಷ್ಟೇ. ನನ್ನ ಕೆಲವು ಸ್ನೇಹಿತರು ಮತ್ತು ನೆಂಟರು ಅಮೇರಿಕದಲ್ಲಿ, ಬೇರೆ ಬೇರೆ ಸ್ಥಳಗಳಲ್ಲಿ ಇದ್ದಾರೆ. ಅವರು ಅಲ್ಲಿನ ಸುಂದರ ಚಿತ್ರಗಳನ್ನು ನನಗೆ ಕಳಿಸುತ್ತಾ ಇರುತ್ತಾರೆ, ನಾನು ನೋಡಿದ್ದನ್ನು ನಾನು ಹಂಚಿಕೊಳ್ಳುತ್ತಿರುತ್ತೇನೆ. ಜೊತೆಗೆ ನೀವು ಚಿತ್ರಗಳನ್ನು, ಅನುಭವಗಳನ್ನು ಹಂಚಿಕೊಳ್ಳುತ್ತೇನೆ ಅಂದರೆ ಖಂಡಿತ ನಾನು ಅದನ್ನು ಸ್ವಾಗತಿಸುತ್ತೇನೆ. ಒಬ್ಬೊಬ್ಬರು ನೋಡುವ ನೋಟ ಒಂದೊಂದು ರೀತಿ ಅಲ್ಲವೇ? ಇದರಲ್ಲಿ ಬೇಸರದ ಪ್ರಶ್ನೆ ಏನಿಲ್ಲ, ವಸ್ತು ಒಂದು, ನೋಟ ಹಲವು ಅಷ್ಟೇ.
   ಖಂಡಿತವಾಗಿಯೂ ಸಂತೋಷದಿಂದ ನಾನು ನಿಮ್ಮ ಬ್ಲಾಗ್ ಗೆ ಭೇಟಿ ಕೊಡುತ್ತೇನೆ.
   ಇನ್ನೊಂದು ಚಿಕ್ಕ ವಿಷಯ. ತಾವು ಕನ್ನಡವನ್ನು ಇಂಗ್ಲೀಷಿನಲ್ಲಿ ಬರೆದ ಬಗ್ಗೆ ನನ್ನ ಒಂದು ಅಭಿಪ್ರಾಯವಿದೆ. ಅದನ್ನು ಓದಲು ನನಗೆ ಕಷ್ಟವಾಗುತ್ತಿದೆ. ಆದ್ದರಿಂದ ದಯಮಾಡಿ ಇನ್ನೊಮ್ಮೆ ಪ್ರತಿಕ್ರಿಸುವಾಗ ಕನ್ನಡವನ್ನು ಕನ್ನಡದಲ್ಲಿ ಬರೆದು ಪ್ರತಿಕ್ರಿಯಿಸುತ್ತೀರ?
   ಇತಿ ವಿಶ್ವಾಸಿ
   ರಂಜನ

 4. vandanegalu ranjanaaravre. Neevu hElida0te innumele kannadada BARAHA aksharagalalli beraLachhu maadi adannu attachment aagi kalisikoduva prayatna maaduttene. Nimma anisikegaLige nanna mechuge ide.

 5. ಚಿತ್ರಗಳು ಸಕ್ಕತ್ ಆಗಿವೆ.
  ಬರಹವೂ ಸಮರ್ಪಕವಾಗಿದೆ.
  -ಆಸು ಹೆಗ್ಡೆ

  • Thank u very much.


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: