ಬ್ಲಾಗ್ ಬರೀದೆ ಹತ್ರ ಹತ್ರ ಒಂದು ವರ್ಷ ಅಯ್ತು. ಮಧ್ಯದಲ್ಲಿ ಕೆಲವು ಖಾಸಗಿ ತಾಪತ್ರಯಗಳು ಮನಸ್ಸನ್ನು ಶಾಂತವಾಗಿರುವುದಕ್ಕೆ ಬಿಡ್ತಾ ಇರಲಿಲ್ಲ. ಈ ಮನಸ್ಸೆ ಹೀಗೆ ಕಣ್ರಿ, ಒಂದು ಸಾರಿ ಚಂಚಲತೆಯನ್ನು ಕಲಿತುಕೊಂಡು ಬಿಟ್ರೆ ಹುಚ್ಚು ಕುದುರೆಯ ಹಾಗೆ ಅಲೆಯುತ್ತಲೇ ಇರುತ್ತೆ. ನಾನು ಬರೀಬೇಕು ಅನ್ನೊ ಅಸೆ ಏನೊ ಇತ್ತು, ಜೊತೆಗೆ ನಿಮ್ಮ ಹತ್ರ ಹಂಚಿಕೊಳ್ಳೊ ವಿಷಯಾನೂ ಇತ್ತು, ಆದ್ರೆ ಮನಸ್ಸನ್ನು ಮಾತ್ರ ಒಂದು ಕಡೆ ನಿಲ್ಲಿಸಿ ಬರಹದತ್ತ ಗಮನ ಹರಿಸೋಕೆ ಆಗ್ತಾನೆ ಇರ್ಲಿಲ್ಲ. ಸ್ನೇಹಿತ, ಸ್ನೇಹಿತೆಯರೆಲ್ಲ ಯಾಕೆ ಬರೀತಾ ಇಲ್ಲ ಅಂತ ಕೇಳೋಕೆ ಶುರು ಮಾಡಿದ್ರು, ನನ್ನ ಪತಿ ಕೂಡ ಯಾಕೆ ನಿನ್ನ ಬರವಣಿಗೆ ನಿಲ್ಲಿಸಿಬಿಟ್ಟಿದ್ದೀಯ? ಬರಿ ಬರಿ ಅಂತ ಹೇಳ್ತಾನೆ ಇದ್ರು. ಅಂತೂ ಇವತ್ತು ಬರೀಲೇ ಬೇಕು ಅಂತ ಗಟ್ಟಿ ಮನಸ್ಸು ಮಾಡಿ ಕೂತುಬಿಟ್ಟಿದ್ದೀನಿ. ಮನಸ್ಸಿನಾಳದಲ್ಲಿ ಅವಿತಿಟ್ಟುಕೊಂಡಿದ್ದ ಎಷ್ಟೋ ವಿಷಯಗಳು ನನ್ನ ಬಗ್ಗೆ ಬರಿ, ನನ್ನ ಬಗ್ಗೆ ಬರಿ ಅಂತ ಪೈಪೋಟಿ ಮಾಡ್ತಾ ಇವೆ. ಎಲ್ಲವನ್ನೂ ನಿಮ್ಮೊಂದಿಗೆ ಹಂಚಿಕೊಳ್ಳುವ ಹೊಸ ಉತ್ಸಾಹದೊಂದಿಗೆ ಬ್ಲಾಗನ್ನು ಮರು ಪ್ರಾರಂಭ ಮಾಡ್ತಾ ಇದೀನಿ. ಮೊದಲಿನ ಹಾಗೆ ಬನ್ನಿ, ಓದಿ, ಅಭಿಪ್ರಾಯ ತಿಳಿಸಿ ಪ್ರೋತ್ಸಾಹಿಸಿ.
ಮರು ಹುಟ್ಟು

The URI to TrackBack this entry is: https://ranjanahegde.wordpress.com/2010/04/29/%e0%b2%ae%e0%b2%b0%e0%b3%81-%e0%b2%b9%e0%b3%81%e0%b2%9f%e0%b3%8d%e0%b2%9f%e0%b3%81/trackback/
ಮರು ಹುಟ್ಟಿ ಜೀವ ತುಂಬಿ ಕಳೆ ನೀಡಲು ಬರುತ್ತಲಿದ್ದೀರಿ ಖಂಡಿತಾ ಮೊದಲಿನಂತೆ ನಮ್ಮ ಅನಿಸಿಕೆಗಳು ನಿಮ್ಮೊಂದಿಗೆ ಇದ್ದೇ ಇರುತ್ತೆ… ಬರೆಯುತ್ತಲಿರಿ.