ಎಲೆಯ ಮೇಲಿನ ನೀರು
ಆಗ ತಾನೇ ಬಂದು ನಿಂತಿತ್ತು ಮಳೆ
ಎಲೆಗಳಿಂದ ತೊಟ್ಟಿಕ್ಕುತ್ತಿತ್ತು ಒಂದೊಂದೇ ಹನಿ
ತನಗೆ ನೀರುಣಿಸಿ ತಂಪಾಗಿಸಿದ್ದಕ್ಕಾಗಿ ಬಂದ ಆನಂದ ಭಾಷ್ಪವೋ
ತನ್ನ ಅನುಮತಿ ಇಲ್ಲದೇ ತೋಯಿಸಿ ಚಳಿ ಹುಟ್ಟಿಸಿದ್ದಕ್ಕಾಗಿ ಬಂದ ಕಣ್ಣೀರೋ
ನಾನರಿಯದಾದೆ
ಸೋನೆ ಮಳೆ
ಸೋನೆ ಮಳೆ ಸಣ್ಣದಾಗಿ ಸುರಿಯುತ್ತಿದ್ದರು
ಅದರ ಆನಂದವನ್ನು ಅನುಭವಿಸಲು ನನ್ನಿಂದಾಗುತ್ತಿಲ್ಲ
ಸೋನೆ ಮಳೆಯಲ್ಲೇ ಮರೆಯಾದ ಇನಿಯನ ನೆನಪು
ಮನದಲ್ಲಿ ಇನ್ನೂ ಕಾಡುತ್ತಿದೆಯಲ್ಲ
ಹೊಸ ಚಪ್ಪಲ್
ಹೊಸದಾಗಿ ಕೊಂಡ ಚಪ್ಪಲ್ ಕಚ್ಚುತ್ತಿತ್ತು ಕಾಲು
ತನ್ನನ್ನು ಮೆಟ್ಟಿ, ಉರುತುಂಬಾ ಸುತ್ತಿ ಸವೆಸಿದ್ದಕ್ಕಾಗಿ ಕೋಪವೇನೋ
ಪ್ರೀತಿಯ ನಾಟಕ
ನೀನು ಸ್ವಲ್ಪ ದಿನ ಉರಲ್ಲಿಲ್ಲವಲ್ಲ ಎಂಬ ಬೇಸರಕ್ಕಿಂತ
ಮತ್ತೆ ತಿರುಗಿಬರುವೆಯಲ್ಲ ಎಂಬ ಬೇಜಾರೆ ಹೆಚ್ಚು
ತಿರುಗಿ ಬಂದರು ತೊಂದರೆಯಿಲ್ಲ ಮತ್ತೆ ಅದೇ ಪ್ರೀತಿಯ
ನಾಟಕವಾಡಬೇಕಲ್ಲ ಎಂಬ ಭಯ ಅದಕ್ಕೂ ಹೆಚ್ಚು
ಬಂಧಿ
ನಿನ್ನನ್ನು ಬಂಧಿಸಲೆಂದು ಹಣೆದ ಪ್ರೀತಿಯ ಬಲೆಯಲ್ಲಿ
ನಿನ್ನೊಂದಿಗೆ ನಾನು ಸಿಲುಕಿಕೊಂಡೆನಲ್ಲ
ಇದರಲ್ಲಿ ಬಂಧಿಸಿದವರಾರು ಬಂಧಿ ಯಾರು ಎಂದೇ ತಿಳಿಯದಾಯಿತಲ್ಲ
ಮಂಚ
ಮಲಗುವ ಮಂಚ ಕರ ಕರ ಎಂದು ಸದ್ದು ಮಾಡುತ್ತಿತ್ತು
ನನ್ನುನ್ನು ಹೊರಲಾರದ ಕಷ್ಟಕ್ಕೋ, ತಿಗಣೆಗಳ ಕಾಟ ಕ್ಕೊ
ತನ್ನ ಅಸಮಾಧಾನವನ್ನು ಈ ರೀತಿ ವ್ಯಕ್ತಪಡಿಸುತ್ತಿತ್ತು
ಒಂದಕ್ಕಿಂತ ಒಂದು ಸಕ್ಕತ್ ಆಗಿದೆ.
ಹೀಗೆಯೇ ಬರೆಯುತ್ತಿರಿ.
-ಆಸು ಹೆಗ್ಡೆ.
ಆಸು ಅವರೇ,
ತುಂಬಾ ಧನ್ಯವಾದಗಳು ನನ್ನ ಬರಹ ಓದಿ ತಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ. ತಮ್ಮೆಲ್ಲರ ಪ್ರೋತ್ಸಾಹದಿಂದ ಹೀಗೆ ಬರೆಯುತ್ತಿರಲು ಪ್ರಯತ್ನಿಸುತ್ತೇನೆ.
ವಿಶ್ವಾಸಿ
ರಂಜನಾ
chanagiddu. 🙂
Thank you MR.sushruta.
Regards
Ranjana
ಚೆಂದದ ಹನಿಗಳು ಹೀಗೆ ಬರೀತಾ ಇರಿ .. 🙂
its very nice,above all matter is real type
Hai dear,
Your Ranvins world are very nice iam so happy with your words.