ಹೌಸ್ ವೈಫ್

ಚಿತ್ರಕಲೆ, ಸಂಗೀತ ಮುಂತಾದ ವಿಧ ವಿಧವಾದ ಕಲೆಗಳಂತೆಯೇ ಚೆನ್ನಾಗಿ, ರುಚಿಕಟ್ಟಾದ ಅಡುಗೆ ಮಾಡುವುದೂ ಒಂದು ಕಲೆ. ಜಗತ್ತಿನಲ್ಲಿ ಬಹಳಷ್ಟು ಜನ ಅಡುಗೆ ಮಾಡುತ್ತಾರೆ. ಆದರೆ ಎಲ್ಲರೂ ರುಚಿ ರುಚಿಯಾಗೇ ಮಾಡುತ್ತಾರೆ ಅಂತ ಏನಿಲ್ಲವಲ್ಲ. ರುಚಿಯಾಗಿ ಅಡುಗೆ ಮಾಡುವುದಕ್ಕೂ ತಾಳ್ಮೆ, ಪರಿಶ್ರಮ, ಶ್ರದ್ಧೆ, ಅನುಭವ ಎಲ್ಲ ಬೇಕು. ಅಡುಗೆ ಮಾಡುವುದು ಎಲ್ಲರೂ ಸ್ವಲ್ಪ ಮಟ್ಟಿಗಾದರೂ ಕಲಿಯುವಂತಹ ಒಂದು ಕಲೆ.

ಹೌಸ್ ವೈಫ್ ಅಂದ ತಕ್ಷಣ “ಓ ನೀನು ಕೆಲಸಕ್ಕೆ ಹೋಗ್ತಾ ಇಲ್ವಾ?” ಅಂತ ಮುಗೆಳೆಯುವವರೂ ಇದ್ದಾರೆ. ಹೌಸ್ ವೈಫ್ ಅಂದರೆ ಬರೇ ಮನೆಯಲ್ಲಿ ಅಡುಗೆ ಮಾಡಿಕೊಂಡು ಕುಳಿತಿರುವವರು ಅನ್ನುವ ಭಾವನೆ. ಕೆಲವರು ತಾವು ಮನೆಯಲ್ಲಿರುವವರು, ಹೊರಗೆ ಹೋಗಿ ಕೆಲಸ ಮಾಡೋರಲ್ಲ ಅಂತ ಹೇಳೋಕೆ ಹಿಂಜರಿತಾರೆ. ಅವರ ಬಗ್ಗೆನೆ ಅವರಿಗೆ ಕೀಳರಿಮೆ. ನಾನೇನು ಮಾಡುತ್ತಿಲ್ಲ, ಗಂಡನ ಹತ್ತಿರ ಹಣ ತೆಗೆದುಕೊಳ್ಳಬೇಕಲ್ಲ ಎಂಬ ಭಾವನೆ.

ಇಡೀ ದಿನ ಮನೆಯಲ್ಲಿದ್ದು, 3 ಹೊತ್ತು ರುಚಿಯಾದ ಅಡುಗೆ ಮಾಡಿ, ಗಂಡನ (ಮಕ್ಕಳಿದ್ದರೆ ಮಕ್ಕಳ) ಅವಶ್ಯಕತೆಗಳನ್ನು ನೋಡಿಕೊಂಡು, ಮನೆಯ ಸ್ವಚ್ಛತೆ ಮತ್ತು ಇತರ ಕೆಲಸಗಳನ್ನು ನಿಭಾಯಿಸಿಕೊಂಡು ಹೋಗುವುದು ಯಾವುದಕ್ಕೆ ಕಮ್ಮಿ ಹೇಳಿ? ನಾನು ಸಹ ಕೆಲವೊಮ್ಮೆ ಹೀಗೆ ಯೋಚಿಸುತ್ತಿದ್ದೆ. ನಾನು ಹೊರಗೆ ಹೋಗಿ ಹಣ ಸಂಪಾದಿಸಿಕೊಂಡು ಬಂದರೆ ಮಾತ್ರ ಗೌರವ,ಇಲ್ಲವಾದರೆ ನಾನು ಏನು ಮಾಡುತ್ತಿಲ್ಲ, ನನ್ನವರ ಮೇಲೆ ಹೊರೆಯಾಗಿದ್ದೇನೆ ಅಂತೆಲ್ಲಾ ಯೋಚಿಸುತ್ತಿದ್ದೆ. ಆದರೆ ನನ್ನ ಈ ಯೋಚನೆಯನ್ನು ತಿಳಿದ ನನ್ನವರು ಹೇಳಿದ ಮಾತು ಇದು. ” ಮನೆಯಲ್ಲಿದ್ದು ನನ್ನ ಅವಶ್ಯಕತೆಗಳನ್ನೆಲ್ಲ ನೋಡಿಕೊಂಡು, ಮನೆಯ ಆಗು ಹೋಗುಗಳನ್ನು ನೋಡಿಕೊಂಡು ನನಗೆ ಹೊರಗೆ ದುಡಿಯುವ ಶಕ್ತಿ ಕೊಡುವವಳು ನೀನು. ನೀನು ನನ್ನ ಮೇಲೆ ಹೊರೆಯಾಗಿಲ್ಲ. ನಿನ್ನ ಪ್ರೋತ್ಸಾಹ ಇದ್ದಾರೆ ಮಾತ್ರ ನಾನು ಏನನ್ನಾದರೂ ಮಾಡಲು ಸಾಧ್ಯ. ನೀನು ಮನೆಯಲ್ಲಿ ದುಡಿಯುತ್ತೀಯ, ನಾನು ಹೊರಗೆ ಅಷ್ಟೇ. ನಾನು ದುಡಿಯುವುದರಲ್ಲಿ ನಿನಗೂ ನನ್ನಷ್ಟೇ ಹಕ್ಕಿದೆ” ಅಂತ ತಿಳಿಸಿ ಹೇಳಿದರು. ನನಗೂ ಅದು ನಿಜ ಅನ್ನಿಸಿತು. ಆಗಿನಿಂದ ನಾನು ನನ್ನ ವಿಚಾರಧಾರೆಯನ್ನು ಬದಲಾಯಿಸಿಕೊಂಡಿದ್ದೇನೆ. ನನ್ನ ಹಾಗೆ ಯೋಚಿಸುವವರು ಬಹಳಷ್ಟು ಜನ ಇದ್ದಾರೆ. ನೀವು ಕೂಡ ನಿಮ್ಮ ವಿಚಾರಧಾರೆಯನ್ನು ಬದಲಾಯಿಸಿಕೊಳ್ಳಿ. ಹೊರಗೆ ದುಡಿಯುವ ಮನಸ್ಸಿದ್ದರೆ, ಅನುಕೂಲವಿದ್ದರೆ ಹೊರಗೆ ಹೋಗಿ ಕೆಲಸ ಮಾಡಬಹುದು. ಇಲ್ಲವಾದರೆ ಮನೆಯ ಆಗು ಹೋಗುಗಳನ್ನು ಚೆನ್ನಾಗಿ ನಿಭಾಯಿಸಿ (ಸಂತೋಷದಿಂದ) ನಿಮ್ಮನ್ನು ನೀವು ಕೀಳಾಗಿ ಕಾಣಬೇಡಿ.

ನಾನು ಸಹ ವರ್ಷದ ಹಿಂದಷ್ಟೇ ಹೊಸದಾಗಿ ಗೃಹಿಣಿಯ ಪಟ್ಟವನ್ನು ಹೊಂದಿದವಾಳಾದ್ದರಿಂದ ಅಡಿಗೆಯಲ್ಲಿ ಅಷ್ಟೊಂದು ನುರಿತವಳಲ್ಲ. ಆದರೂ ನಾನು ಕಲಿತಂತಹ ಕೆಲವು ಅಡಿಗೆಗಳನ್ನು ಇಲ್ಲಿ ಹಾಕಿದ್ದ್ಡೇನೆ. ಒಮ್ಮೆ ಭೇಟಿ ಕೊಟ್ಟು ನೋಡಿ ತಮ್ಮ ಅಭಿಪ್ರಾಯ ತಿಳಿಸಿ.

ranjanah.blogspot.com

pic-12
pic-22

Published in: on ಮೇ 5, 2009 at 3:10 ಅಪರಾಹ್ನ  Comments (2)  

The URI to TrackBack this entry is: https://ranjanahegde.wordpress.com/2009/05/05/%e0%b2%b9%e0%b3%8c%e0%b2%b8%e0%b3%8d-%e0%b2%b5%e0%b3%88%e0%b2%ab%e0%b3%8d/trackback/

RSS feed for comments on this post.

2 ಟಿಪ್ಪಣಿಗಳುನಿಮ್ಮ ಟಿಪ್ಪಣಿ ಬರೆಯಿರಿ

 1. ರಂಜನಾಅವರೇ,

  ನೀವು ನಿರೂಪಿಸಿದ ಹಾಗೆ, ಇಂದಿನ ದಿವಸ ಈ ಒಂದು ಸಂಗತಿ ಸಮಾಜದಲ್ಲಿ ಅನಾರೋಗ್ಯವನ್ನ
  ಉಂಟು ಮಾಡಿದೆ. “ನಾವು housewife ಅಲ್ರೀ, but homemakers ಅಂತ ಯಾರೊ
  ಹೇಳಿದಾಗ, ಹಾಗಿದ್ರೆ ಗಂಡಸ್ರೇನ್ home-breakersನಾ, ಅಂತ ಕೇಳೋಣಾ ಅನ್ಸಿತ್ತು.. 😉
  ನಾ ಒಮ್ಮೆ ನನ್ನ ಸ್ನೇಹಿತನೊಬ್ಬನ ವಿವಾಹಕ್ಕೆ ಹೋದಾಗ, ಇನ್ನಿತರ ಗೆಳೆಯರೆಲ್ಲ ತಮ್ಮ ಸಂಗಾತಿಗಳ
  ಜೊತೆ ಆಗಮಿಸಿದ್ರು. ಅವರಲ್ಲಿ ಒಬ್ಬನ ಮಡತಿ, ಕೆಲಸಕ್ಕೆ ಹೊಗುತ್ತಿರಲಿಲ್ಲ. ಈ ಕಾರಣಕ್ಕಗಿ ಉಳಿದವರು
  ಈಕೆಯನ್ನ ಮಾತನಾಡಿಸಲೂ ಇಲ್ಲ. ತಾವೆನ್ ತಮ್ಮ ಕಂಪನಿಗಳ CEO ಅನ್ನೋ ರೀತಿಯಲ್ಲಿ
  ವರ್ತಿಸುತ್ತಿದ್ದರು. ಆದರೆ ಈಕೆಯು ತೋರುತ್ತಿದ್ದಂತಹ ಸೌಮ್ಯತೆಯಾಗಲೀ, ಮಾತಿನಲ್ಲಿರುವ
  ಒಲವಾಗಲೀ, ಅಥವಾ ಇತರರ ಮೇಲಿಟ್ಟಿರುವ ಗೌರವ / ಕಾಳಜಿಯಾಗಲೀ ಉಳಿದವರಲ್ಲಿ ಕಂಡುಬರಲಿಲ್ಲ.
  ನನ್ನ ಅಮ್ಮ ಜೊತೆಯಾಗಿ ಇದ್ದಿದ್ರಿಂದ ಈಕೆಗೆ ಸ್ವಲ್ಪ ಸಮಾದಾನವಾಗಿತ್ತು. ಹಾಗೆಂತ ಹೇಳಿ, ಹೊರಗೆ
  ದುಡಿಯುವರೆಲ್ಲ ಹೀಗೇ ಇರ್ತಾರೆ ಅಂತ ಏನ್ ನಾ ಪರಿಗಣಿಸ್ತಾ ಇಲ್ಲ. ಆದರೆ financial independence
  ದೊರಕಿದೆ ಅಂತ ತಮ್ಮ attitude ಅನ್ನ ಸ್ವಲ್ಪ ಮಿತಿಯಲ್ಲಿ ಇಟ್ಟುಕೊಳ್ಳೋದು ಉಚಿತವೆಂದು ನನ್ನ ಭಾವನೆ.

  ನನ್ನ ಅಭಿಪ್ರಾಯದಲ್ಲಿ, ಇಂದಿನ ಹಾಗು ಮುಂದಿನ ದಿವಸಕ್ಕೆ, ಹೆಣ್ಣಿಗೆ ಒಂದು ಆರ್ಥಿಕ ಭದ್ರತೆ ಇರಲೇ ಬೇಕು.
  ಅದು ಯಾವುದೇ ರೀತಿಯಲ್ಲಾಗಿರಬಹುದು – ಸ್ವಂತ ಉದ್ಯೋಗ ಅಥವಾ ಆಸ್ತಿ, ಹೀಗೆ…
  ಜೀವನ ಪರ್ಯಂತ ಅಲ್ದೇ ಇದ್ರೂ at least ಮಕ್ಕಳನ್ನ ಹೆರುವ ತನಕವಾದ್ರೂ ಯಾವುದಾದರು ಉದ್ಯೋಗ-
  ದಲ್ಲಿದ್ದರೆ, ಹೊರಗಿನ ಪ್ರಪಂಚದ ಅರಿವಿನ ಜೊತೆ ವ್ಯವಹಾರ ಜ್ಞಾನ ಹಾಗು ಜೀವನವನ್ನ ಎದುರಿಸಲು
  ಹೆಚ್ಚಿನ ಆತ್ಮವಿಶ್ವಾಸ ದೊರಕುತ್ತೆ. ಈಗೆಂತು ಬಹಳಷ್ಟು ಮಹಿಳೆಯರು (ಹೆಚ್ಚಿನ ವ್ಯಾಸಂಗ ಮಾಡಿದವರನ್ನೂ
  ಹಿಡಿದು) ಮನೆಯಲ್ಲಿರುವ ಜವಾಬ್ದಾರಿಗಳ ಮೂಲ್ಯವನ್ನರಿತು “ಹೊರಗಿನ” ಉದ್ಯೋಗವನ್ನ ತೊರೆದಿದ್ದಾರೆ,
  ಹಾಗು ಹೌಸ್ ವೈಫ್ ಅನ್ನಿಸಿಕೋಳ್ಳಲು ಹೆಮ್ಮೆ ಪಡುತ್ತಿದ್ದಾರೆ! ನೀವು ಸಹ ಗಮನಿಸಿರಬಹುದು, ಏನಂದ್ರೆ,
  ತಾಯಿಯ ಮಮತೆ ಹಾಗು ಸಂಪರ್ಕವನ್ನ ಅವಶ್ಯಕತೆಗೆ ಬೇಕಾದ ಮಟ್ಟಿಗೆ ಸಿಗದ ಕಾರಣದಿಂದ, ಮಕ್ಕಳು
  ಸಮಾಜದಿಂದ ದೂರವಿದ್ದು, ಏಕಾಂಗಿತನಕ್ಕೆ ಒಳಪಟ್ಟಿದ್ದಾರೆ. ಮನೆಗೆ ಯಾರದರೂ ಬಂದರೆ ಕೋಣೆಗೆ ಹೋಗಿ
  ಬಾಗಿಲನ್ನ ಹಾಕಿಕೊಳ್ಳುವುದು, ಹೊರಗೆಲ್ಲಾದರೂ ಹೋದಾಗ ಯಾರೊಡನೆಯೂ ಮಾತನಾಡದೆ ಇರುವುದು,
  ಹೀಗೆ…. ನೀವು ಬರೆದಿರುವ ಹಾಗೆ inferiority complex ಅನ್ನೊದನ್ನ ಹೆಣ್ಮಕ್ಕಳು ಕಿತ್ತು ಬಿಸಾಡಬೇಕು.
  ನಿಮ್ಮ ಸ್ಥಾನ ಹಾಗು ಪರಿಶ್ರಮಕ್ಕಾಗಿ ನನ್ನ ಪರವಾಗಿ ಅಭಿನಂದನೆಗಳು.

  ಸರಿ, ನಾ ಇಲ್ಲಿಗೇ ನಿಲ್ಸ್ತಿ; ಇಲ್ದೋದ್ರೆ ಆ ಬರ್ದಿದ್ commentಏ ನಿಮ್ಮ ಲೇಖನಕ್ಕಿಂತ ದೊಡ್ದಾಗೋಗ್ತು!!!

  -ಸುದರ್ಶನ್

 2. adige chennagide ansotte….chakkuli and lodu nan favourit….


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: