ಬೆಳಿಗ್ಗೆ 7.30 ಘಂಟೆಗೆ ಬೆಂಗಳೂರಿನ ಜಯನಗರದಲ್ಲಿ ಬಸ್ ಇಳಿದಾಗ, BTM layout ಗೆ ಹೋಗೋಕೆ 100 ರೂಪಾಯಿ ಕೊಟ್ರೆ ಬರ್ತೀನಿ, 120 ರೂಪಾಯಿ ಕೊಟ್ರೆ ಬರ್ತೀನಿ ಅಂತ ಬಸ್ ಹತ್ರ ನಿಂತು ಕೇಳ್ತಾ ಇದ್ದ ಆಟೋದವರ ನೆನಪು ಬಂದಿದ್ದು ನಾವು ಮಲೇಶಿಯಾಗೆ ಹೋದಾಗ. 2 ತಿಂಗಳ ಹಿಂದೆ ನಾವು ಪ್ರವಾಸಕ್ಕೆ ಅಂತ ಮಲೇಶಿಯಾದ ರಾಜಧಾನಿ kuala lumpur ಗೆ ಹೋಗಿದ್ದೆವು. ಬೆಳಿಗ್ಗೆ ಹೋಗಿ ಅಲ್ಲಿನ Airport ನಿಂದ ಹೊರಗೆ ಬಂದು ನಾವು ಬುಕ್ ಮಾಡಿದ್ದ ಹೊಟೆಲ್ ಗೆ ಹೋಗುವುದಕ್ಕೆ ಅಂತ ಟ್ಯಾಕ್ಸಿ ಕೇಳಿದ್ರೆ ಒಬ್ಬ 120 ರಿಂಗೇಟ್ಸ್ ( ಮಲೇಶಿಯಾದ ಕರೆನ್ಸಿ) ಕೊಡಿ ಅಂದ್ರೆ ಇನ್ನೊಬ್ಬ 100 ಅಂದ. ಹೀಗೆ ಮನಸ್ಸಿಗೆ ಬಂದಷ್ಟು ದುಡ್ಡು ಕೆಳೋರೆ ಹೊರತು ಮೀಟರ್ ಹಾಕುವವರ ಮಾತೇ ಇಲ್ಲ. ಅದರಲ್ಲೂ ನಾವು ಬೇರೆ ಪ್ರದೇಶದವರು, ಹೊಸದಾಗಿ ಅಲ್ಲಿ ಹೋದವರು ಅಂತ ತಿಳಿದರಂತು ಒಬ್ಬೊಬ್ಬರು ಒಂದೊಂದು ರೇಟ್ ಹೇಳುವವರೇ. ಈ ಹಾಡು ನಾವು ತಿರುಗಿ ಬರುವುದಕ್ಕೆಂದು ಏರ್ಪೋರ್ಟ್ಗೆ ಹೋಗುವವರೆಗೂ ಇತ್ತು. ಆ ವಿಷಯ ಹಾಗಿರಲಿ, ನಾನು ಇಲ್ಲಿ ಹೇಳುವುದಕ್ಕೆ ಹೊರಟಿರುವುದು ನಾವು ನೋಡಿದ ಸ್ಥಳಗಳ ಬಗ್ಗೆ.
kuala lumpur ದ genting highland, Bathu caves, Petronas twin tower ಇವು ಮೂರು ಮುಖ್ಯ ಪ್ರವಾಸಿ ಸ್ಥಳಗಳು.
ನಮ್ಮ ಉುಟಿ ಯ ಹಾಗೆ ಎತ್ತರದ ಪ್ರದೇಶ, ಹೋಗುವಾಗ ಮಂಜು ಕವಿದು ರಸ್ತೆಯೇ ಕಾಣದಂತಿರುವ ದೃಶ್ಯ, ಮಧ್ಯಾಹ್ನವೇ ಚಳಿಯ ಅನುಭವ. ಅಲ್ಲಿ ನಮ್ಮ ವಂಡರ್ ಲಾ ದ ಹಾಗೆ ಆದರೆ ಅದಕ್ಕಿಂತಲೂ ದೊಡ್ಡದಾದ ಒಂದು ಅಮ್ಯೂಸ್ಮೆಂಟ್ ಪಾರ್ಕ್. ಅಲ್ಲಿ ವಿಧ ವಿಧದ ಆಟಗಳು, ಷೋಗಳು, ದೃಶ್ಯಗಳು….ಒಟ್ಟಾರೆ ಒಂದು ದಿನ ಪೂರ್ತಿ ಅಲ್ಲಿ ಕಳೆದರು ನೋಡಿ, ಅನುಭವಿಸಿ ಮುಗಿಯದಿರುವಂತಹ ಸ್ಥಳ. ಅಲ್ಲಿನ ಕೆಲವು ಚಿತ್ರಗಳು ನಿಮಗಾಗಿ…
ನಮ್ಮ ಮುಂದಿನ ಪಯಣ Petronas Twin Tower ನ ಕಡೆಗೆ. ಸರ್ಕಾರದ ಮತ್ತು ಇತರ ಕೆಲವು ಕಂಪನಿಗಳ ಸಹಾಯದೊಂದಿಗೆ Petronas ಕಂಪನಿ ಇದನ್ನು 1992 ರಿಂದ 1998 ರವರೆಗೆ ನಿರ್ಮಾಣ ಮಾಡಿತು. 88 ಅಂತಸ್ತುಗಳ ಎತ್ತರವಿರುವ ಈ ಅದ್ಭುತ ಜೋಡಿ ಕಟ್ಟಡಗಳ ಮಧ್ಯೆ 41ನೆಯ ಅಂತಸ್ತಿನಲ್ಲಿ ಒಂದು over bridge ಕಟ್ಟಲಾಗಿದೆ. ಈ ಕಟ್ಟಡದ ಅಂತಸ್ತುಗಳಲ್ಲಿ ಹಲವು ಪ್ರಮುಖ ಕಂಪನಿಗಳು ತಮ್ಮ office branch ಹೊಂದಿವೆ. 41ನೆಯ ಅಂತಸ್ತುಗಳವರೆಗೆ ಹೋಗಿ, ಆ ಅದ್ಭುತ ಸೌಂದರ್ಯವನ್ನು ಸವಿಯುವ ಅವಕಾಶ ಸಾರ್ವಜನಿಕರಿಗೆ ಇದೆ. Glass, steel, concrete ಇವುಗಳನ್ನು ಉಪಯೋಗಿಸಿ ಈ ಅದ್ಭುತ ಕಟ್ಟಡದ ನಿರ್ಮಾಣ ಮಾಡಲಾಗಿದೆ. ಆ ಸುಂದರ ಕಟ್ಟಡಗಳ ಮತ್ತು ಜಗತ್ತಿನ ಇನ್ನೂ ಹಲವು ಎತ್ತರದ ಕಟ್ಟಡಗಳ ಮಾಹಿತಿಯನ್ನು ಹೊಂದಿದ ಚಿತ್ರಗಳು ಇಲ್ಲಿವೆ.
ಕೊನೆಯದಾಗಿ ನಾವು ಭೇಟಿ ನೀಡಿದ ಸ್ಥಳ ಒಂದು ದೇವಸ್ಥಾನ. Bathu caves (god murugan temple) . ಇಲ್ಲಿನ ಗುಹೆಗಳು ಮತ್ತು ಮುರುಗ ( ಷಣ್ಮುಖ) ದೇವರು ಪ್ರಸಿದ್ಧ. ಅಲ್ಲಿನ ಒಂದು ಚಿತ್ರ ತಮ್ಮ ನೋಟಕ್ಕೆ.
ನಾವು ಪ್ರವಾಸ ಮುಗಿಸಿ ಬಂದು 2 ತಿಂಗಳುಗಳಾದರೂ ನಿನ್ನೆ ತಾನೇ ನೋಡಿ ಬಂದಂತೇ ಅನ್ನಿಸುತ್ತಿದೆ. ಆದ್ದರಿಂದ ಅಲ್ಲಿನ ನನ್ನ ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕು ಅನ್ನಿಸಿ ಈ ಬ್ಲಾಗನ್ನು ಬರೆಯುತ್ತಿದ್ದೇನೆ. ಅಲ್ಲಿನ ಮಾಹಿತಿ ಮತ್ತು ಚಿತ್ರಗನ್ನು ನೋಡಿ ನೀವೂ ಸಂತೋಷ ಪಡುತ್ತೀರಿ ಎಂದು ನನ್ನ ಮನಸ್ಸು ಹೇಳುತ್ತಿದೆ, ಸರಿನಾ……..