ನೀ ಮರವಾಗಿ ಆಸರೆ ನೀಡೆ
ನಾ ಲತೆಯಾಗಿ ಬಳಸಿ ನಿಲ್ಲುವೆ ನಿನ್ನ
ನೀ ಸಾಗರವಾಗಿ ನನ್ನ ನಿನ್ನೊಳು ಹುದುಗಿಸಿಕೊಳ್ಳೆ
ನಾ ನದಿಯಾಗಿ ಓಡೋಡಿ ಬರುವೆ ನಿನ್ನ ಸೇರಲು
ನೀ ಮುನ್ನಡೆಯೆ ದಾರಿ ದೀಪವಾಗಿ
ನಾ ಬರುವೆ ನಿನ್ನ ಹೆಜ್ಜೆ ಗುರುತಾಗಿ
ನೀ ದುಂಬಿಯಾಗಿ ಅಲೆಯುತಿರೆ
ನಾ ಕಾಯುತಿಹೆ ಹೂವಾಗಿ ಮಕರಂದ ನೀಡಲು
ನೀ ಹನಿಯಾಗಿ ವರ್ಷಧಾರೆಯಾಗಿ ಸುರಿಯುತಿರೆ
ನಾ ಕಾಯುತಿಹೆ ಭುವಿಯಾಗಿ ನಿನ್ನ ಹೀರಲು
ನೀ ನನ್ನ ಹಿತವಾಗಿ ನೋವು ನಲಿವೇ ಆಗಿ ಜೊತೆಯಿರಲು
ನಾ ಬರುವೆ ಕೈ ಹಿಡಿದು ಬಾಳಾಗಿ ಬಂಧುವಾಗಿ
ಕವಿತೆ ತುಂಬಾ ಇಷ್ಟ ಆತು ರಂಜನಕ್ಕ…. ಹೀಗೆ ಬರೀತಾ ಇರು… 🙂
Thank u Rajiii
ರಂಜನಾ…
ಪ್ರೇಮ..
ಎಷ್ಟೊಂದು ಬಗೆಯ.
ಕುತೂಹಲ..
ಆಸೆ..
ಭರವಸೆಗಳ..
ನಿರೀಕ್ಷೆ..
ಬದುಕಿಗೊಂದು..
ಅರ್ಥ..
ಸಿಕ್ಕಾಗ..
ಧನ್ಯತೆಯ..
ಸಾರ್ಥಕತೆ..
ಬಹಳ ಚಂದದ ಕವಿತೆ..
ನೀವು ಹುಡುಕಿದ ರೀತಿ ಇಷ್ಟವಾಯಿತು…
tumbumanasina bhaavanegala vyaktapadisuvikege hrudayapoorvaka dhanyavaadagalu prakashanna..
tumba tumbaaaaaaaaane chennagide ee kavana
Thank u Mrudumanase…
ಹಾಯ್ ರಂಜನಾ,
ಎಂದಿನಂತೆ ಪ್ರೀತಿಯನ್ನು ಆದರಿಸಿ ಲೇಖನವು ವರ್ಣರಂಜಿತವಾಗಿ ಮೂಡಿ ಬಂದಿದೆ.. ಬಹುಶ್ಯಃ ಈ ಪ್ರಪಂಚದಲ್ಲಿ ಪ್ರೀತಿ ಪ್ರೇಮಕ್ಕೆ ಕೊಟ್ಟ ಪ್ರಾಮುಖ್ಯತೆಯನ್ನ ಬೇರೆ ಯಾವ ವಿಷಯದಲ್ಲೂ ಕಾಣಲಾರೆವು. ಇದಿಲ್ಲದೆ ಜೀವನವು ಸ್ತಬ್ದಗೊಳ್ಳುವುದು ಖಚಿತ. ಈ ಪ್ರೀತಿ ಪ್ರೇಮ ಎಂಬ ಭಾವನೆಯನ್ನ ಮನುಷ್ಯರಲ್ಲಿ
ಹುಟ್ಟಿಸಿದ ಆ ಭಗವಂತನಿಗೆ ವಂದನೆಗಳು. ಇಂಥದ್ದೇ ಅದ್ಭುತವಾದ ಕಲಾಕಲ್ಪನೆಗಳಿಂದ ಕೂಡಿದ ಲೇಖನಗಳು ಮತ್ತಷ್ಟು ಮೂಡಿಬರಲಿ.
nimma aatmeeya anisikegalige dhanyavaadagalu sudarshan.