ಬದುಕಿನ ಮುಖಗಳು

ಬದುಕಿನ ಮುಖಗಳ ಪರಿಚಯವನ್ನು ಕೆಲವೊಮ್ಮೆ ನಮ್ಮ ಜೀವನದ ಸಣ್ಣ ಸಣ್ಣ ಘಟನೆಗಳು ಮಾಡಿ ಕೊಡುತ್ತವೆ. ಅಂಥದ್ದೇ ಒಂದು ಪುಟ್ಟ ಘಟನೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ..

ಮೊನ್ನೆ ಮೊನ್ನೆ ನಾವು ಮನೆ ಚೇಂಜ್ ಮಾಡಿದಾಗ ಶಿಫ್ಟಿಂಗ್ ಕಷ್ಟಕ್ಕಿಂತ ನಮಗೆ ಎದುರಾಗಿದ್ದು ಉುಟದ ಚಿಂತೆ. ಮನೆಯ ಸಾಮಾನುಗಳನ್ನೆಲ್ಲ ಪ್ಯಾಕ್ ಮಾಡಿ, ಹೊಸ ಮನೆಗೆ ತಂದು ಬಿಚ್ಚಿ ಜೋಡಿಸುವ ತನಕ ನಾವು ಅಡುಗೆ ಮಾಡುವಂತಿಲ್ಲ. ಬೇಗ ಹೊಟೆಲ್ ಗೆ ಹೋಗಿ ಉುಟ ಮಾಡಿಕೊಂಡು ಬಂದುಬಿಡೋಣ ಅಂದ್ರೆ, ಮನೆಯಿಂದ ಅರ್ಧ ಗಂಟೆ ಪ್ರಯಾಣ ಮಾಡಿದ್ರೆ ಮಾತ್ರ ನಮ್ಮ ಸಸ್ಯಾಹಾರದ ಹೊಟೆಲ್ ಸಿಗುತ್ತೆ. ಹೋಗ್ಲಿ ಮನೆಗೆ ಪಾರ್ಸಲ್ ತರಿಸೋಣ ಅಂದ್ರೆ ಇಬ್ಬರಿಗೆ ತರಿಸುವ ಉುಟದ ಹಣಕ್ಕಿಂತ ಮನೆಗೆ ತಂದುಕೊಡುವ ಖರ್ಚೆ ಹೆಚ್ಚಾದಂತೆ ತೋರಿತು. ಮನೆಯ ಹತ್ತಿರ ಇರುವ food court ಎಂಬಲ್ಲಿ ಚೀನೀಯರ, ಮಲೈ ಜನರ ಮಾಂಸದ ಉುಟದ ಭಂಡಾರ. ಅಲ್ಲೇ ಇರುವ ಇನ್ನೊಂದು ಚಿಕ್ಕ ಇಂಡಿಯನ್ ಮುಸ್ಲಿಮ್ ಕ್ಯಾಂಟೀನ್ ನಲ್ಲಿ ಸಿಗುವುದು ಕೂಡ ಮಾಂಸದ ಉುಟವೇ…ಎಣ್ಣೆಯಲ್ಲಿ ಅದ್ದಿದನ್ತಹ ಪ್ಲೇನ್ ಪರಾಟ ಮತ್ತು ದಾಲ್ ಇದು ಮಾತ್ರ ಅಲ್ಲಿ ಸಿಗುವ ಮಾಂಸವಿಲ್ಲದ ಉುಟ.

ಮನೆ ಶಿಫ್ಟ್ ಮಾಡಿ ಜೋಡಿಸುವುದೋ ಅಥವಾ 3 ಹೊತ್ತು ಅರ್ಧ ಗಂಟೆ ಪ್ರಯಾಣ ಮಾಡಿ ಉುಟ ಮಾಡಿಕೊಂಡು ಮತ್ತೆ ಅರ್ಧ ಗಂಟೆ ಪ್ರಯಾಣ ಮಾಡಿ ಮನೆ ತಲುಪುವುದೋ ಅನ್ನುವ ಸಮಸ್ಯೆ. ಹೀಗೆ ಉುಟದ ಚಿಂತೆ ಮಾಡಿಕೊಂಡು ಕುಳಿತಾಗ ಅನೇಕ ಯೋಚನೆಗಳು, ನೆನಪುಗಳು ತಲೆಯಲ್ಲಿ ಸುಳಿದಾಡಿದವು.

ನಾವು ನಮ್ಮ ಉುರಲ್ಲಿದ್ದರೆ ಯಾರಾದರೂ ನೆಂಟರು, ಇಷ್ಟರು, ಸ್ನೇಹಿತರು ಮನೆಗೆ ಬಂದು ಉುಟ ಮಾಡಿಕೊಂಡು ಹೋಗಿ ಅಂತ ಕರೀತಾ ಇದ್ರು, ಇಲ್ಲ ಅಂದರು ಅಲ್ಲಿ ಸಸ್ಯಾಹಾರಿ ಹೋಟೆಲ್‍ಗಳಿಗಂತು ಬರವಿಲ್ಲ.. ಇಲ್ಲೂ ಕೂಡ ಯಾರಾದರೂ ನಮ್ಮ ಮನೆಗೆ ಬಂದು ಉುಟ ಮಾಡಿಕೊಂಡು ಹೋಗಿ ಅಂತ ಕರೆಯ ಬಾರದೇ ಅಂತ ಅನ್ನಿಸಿದ್ದು ಸುಳ್ಳಲ್ಲ. ನಾನು ಮೊದಲು ಉುರಲ್ಲಿದ್ದಾಗ ಎಷ್ಟೊಂದು ಜನರ ಮನೆಗೆ ಉುಟಕ್ಕೆ ಹೋಗುವುದನ್ನು ಬೇಕೆಂದೇ ತಪ್ಪಿಸಿಕೊಂಡಿದ್ದೆ. ಅಪ್ಪ, ಅಮ್ಮ ನೀವು ಹೋಗಿಬನ್ನಿ ನಾನು ಬರೋದಿಲ್ಲ, ಮನೆಯಲ್ಲೇ ಇರ್ತೇನೆ ಅಂತ ಬೇಕಷ್ಟು ಸರಿ ಅಂದಿದ್ದೆ. ಅಕ್ಕ ಪಕ್ಕದ ಮನೆಗಳಲ್ಲಿ ವಿಶೇಷವಿದ್ದಾಗ, ಮನೆಗೆ ಬಂದು ಕರೆದು ಹೋದರು ಸಹ ಯಾರು ಹೋಗ್ತಾರೆ ಅಂತ ಬಹಳಷ್ಟು ಸಲ ಮನೆಯಲ್ಲೇ ಉಳಿದಿದ್ದೆ. ಈಗ ಅವರೆಲ್ಲರ ನೆನಪು ಕಣ್ಣ ಮುಂದೆ ಬಂತು. ಉುರಲ್ಲಿ ಇದ್ದಾಗ, ಕರೆದಾಗ ಹೋಗಿಲ್ಲ. ಈಗ ಹೋಗಬಹುದಿತ್ತು ಆದರೆ ಯಾರು ಕರೆಯುತ್ತಿಲ್ಲ … ಇವೇ ಅಲ್ಲವೇ ಜೀವನದ ಚಿಕ್ಕ ಪುಟ್ಟ ಬದಲಾವಣೆಯ ಮುಖಗಳು?

ಆಮೇಲೆ ಬೇರೆ ದಾರಿಯಿಲ್ಲವಾದ್ದರಿಂದ ಒಂದು ಹೊತ್ತು ಪರಾಟ, ಇನ್ನೊಂದು ಹೊತ್ತು ಅರ್ಧ ಗಂಟೆ ಪ್ರಯಾಣ, ಇನ್ನೊಂದು ಹೊತ್ತು ಮನೆಯಲ್ಲಿ ಕಾರ್ನ್‌ಫ್ಲೇಕ್ಸ್ ತಿಂದು 2 ದಿನ ಕಳೆಯಿತು. ಮೂರನೆಯ ದಿನ ಮನೆಯಲ್ಲಿ ಅಡುಗೆ ಮಾಡಿದಾಗ, ಅದನ್ನು ಉುಟ ಮಾಡುವಾಗ ಏನೋ ಸಂಭ್ರಮ, ಯಾವುದೋ ಸಂತೋಷ…ಬಣ್ಣಿಸಲಾಗದು…….

Published in: on ಆಗಷ್ಟ್ 28, 2009 at 1:57 AM  Comments (6)  

The URI to TrackBack this entry is: https://ranjanahegde.wordpress.com/2009/08/28/%e0%b2%ac%e0%b2%a6%e0%b3%81%e0%b2%95%e0%b2%bf%e0%b2%a8-%e0%b2%ae%e0%b3%81%e0%b2%96%e0%b2%97%e0%b2%b3%e0%b3%81/trackback/

RSS feed for comments on this post.

6 ಟಿಪ್ಪಣಿಗಳುನಿಮ್ಮ ಟಿಪ್ಪಣಿ ಬರೆಯಿರಿ

  1. ನಾವು ಬೆಂಗಳೂರಲ್ಲಿ ಬ್ರೆಡ್ಡು ಬನ್ನು ಪಪ್ಸು ತಿಂದೇ ಜೀವ್ನಾ ಮಾಡ್ತೀವಿ… ನೀವೂ ಟ್ರೈ ಮಾಡಿ ಬೇಕಾದ್ರೆ… 🙂

    • bread bun andre swalpa dura nange amit avare, anna andre ista…

  2. ರಂಜನ ಅವರೆ,
    ನಮಗೂ ಈ ಅನುಭವವಾಗಿ, ಇದರಿಂದ ಕಲಿತ ಒಂದು ಪಾಠವೆಂದರೆ, ಮನೆ ಬದಲಿಸುವಾಗ ಅಡುಗೆ ಮಾಡಲು ಬೇಕಾಗುವ ಸಾಮಾನುಗಳನ್ನು (ಪಾತ್ರೆ, ಅಕ್ಕಿ, ಬೇಳೆ ಇತ್ತ್ಯಾದಿ ಸೇರಿಸಿ) ಕೈಗೆ ಸಿಗುವಂತೆ ಒಂದು ಕಡೆ ಇಟ್ಟುಕೊಂಡಿದ್ದು, ಸಾಧ್ಯವಾದರೆ ಇವನ್ನು ನಮ್ಮ ಜೊತೆ ಕಾರಿನಲ್ಲಿ ತೆಗೆದುಕೊಂಡು ಹೋಗುವುದು. ಹತ್ತಿರದ ಅಂಗಡಿಯಿಂದ ಮೊಸರು, ಎಣ್ಣೆ ಇತ್ಯಾದಿ ಕೊಂಡು ಬಂದರೆ, ಗಂಟೆಯಲ್ಲಿ ಊಟ ರೆಡಿ.:-)

    -ಬಾಲ

    • Hmm heegu madabahudu, next time try madteeni..

  3. ಮನೆಯನ್ನ ಬದಲಾಯಿಸುವ ಬಗ್ಗೆ ನೆನೆಸಿಕೊಂಡರೇನೇ ಭಯ ಹುಟ್ಟಿಸುತ್ತದೆ, ಯಾಕೆಂತಂದ್ರೆ ನನಗೂ ಸಹ ಬಹಳಷ್ಟು ಬಾರಿ ಈ “ಸುಖಾನುಭವ” ಆಗಿದೆ.. 😉 ಆದರೆ ನಾ ಇದರ ಬಗ್ಗೆ ಚರ್ಚೆ ಮಾಡಲು ಹೊರಟಿಲ್ಲ.

    ನೀವು ತಮ್ಮ ಬಾಲ್ಯದಲ್ಲಿನ ಕೆಲ ಘಟನೆಗಳ ಬಗ್ಗೆ ವಿವರಿಸಿದ್ದೀರಿ.. ಎಷ್ಟೋಂದು ಜನ ಊಟಕ್ಕೆ ಬನ್ನಿ ಅಂತ ಕರೆದರೂ ಸಹ ಆ ಒಂದು ಸಮಯಕ್ಕೆ ಅದು ಬೇಕಾಗಿರಲಿಲ್ಲ, ಆದ್ರೆ ಈಗ ಅವಶ್ಯಕತೆ ಬಂದಿರಬೇಕಾದರೆ ಈ ಮಹಾನಗರದಲ್ಲಿ ಯಾರಾದರೂ ಹಚ್ಚಿಕೊಂಡಾರೆಯೇ, ಅಂತ.. ಎಂತಹ ಒಂದು ವಿಪರ್ಯಾಸ ಅನ್ನಿಸೋದಿಲ್ವಾ..? ವಾಸ್ತವ ಅಂತಂದ್ರೆ ನಾವೆಲ್ಲರೂ ಸಹ ಈಗಿನ ಕಾಲಕ್ಕೆ ನಮ್ಮ ಐಡೆಂಟಿಟಿ ಅನ್ನೋದನ್ನೇ ಕಳೆದುಕೊಂಡು ಬಿಟ್ಟಿದ್ದೇವೆ.. ನಮ್ಮ ಒಂದು ಪ್ರಾಂತ್ಯದಲ್ಲಿ “ಬಳಕೆ” ಅನ್ನೋದಕ್ಕೆ ಎಷ್ಟೊಂದು ಪ್ರಾಮುಖ್ಯತೆ ಇದೆ.. ಆದರೆ ಈಗಿನ ಪೀಳಿಗೆ ಅವರಿಗೆ ಬಳಕೆ ಅನ್ನುವುದು ಎಲ್ಲಿಂದ ತಾನೇ ಹುಟ್ಟಲು ಅಥವಾ ಉದ್ಭವಿಸಲು ಸಾದ್ಯ ಹೇಳಿ.. ಏನಿದ್ರು ಹೀಗೆ ಬ್ಲಾಗ್ ಎದುರೋ, ಅಥವಾ ಆರ್ಕುಟ್ನಲ್ಲೋ ನಮ್ಮವರನ್ನ ಹಿಡಿದುಕೊಂಡು ಬಳಕೆಯನ್ನ ಬೆಳೆಸಲಿಕ್ಕೆ ಪ್ರಯತ್ನ ಪಡ್ತಾ ಇದ್ದೇವೆ… ಹಾಗೆಂತ ಹೇಳಿ chat ಅಥವಾ orkut ಮೂಲಕವಾಗಿ ಹಬ್ಬದ ಆಚರಣೆಯಾಗಲಿ, ಅಥವಾ ಹೊಟ್ಟೆ ತುಂಬುವುದಾಗಲಿ ಆಗೋದಕ್ಕೆ ಸಾಧ್ಯವಿಲ್ಲ ಅಲ್ವಾ? ಇದೇ ಒಂದು ಸಂಗತಿ ಅತೀ ಬೇಸರ ಹುಟ್ಟಿಸುತ್ತಿದೆ.. ಜನರಿಗೆ ಮುಖಾಮುಖಿ ಬೇಟಿ ಆಗಲೂ ಸಹ ಸಮಯ ಇಲ್ಲದೆ ಹೋಯಿತೇ ಅಂತ.. ಹೀಗಿರುವಾಗ “ಬಳಕೆ” ಅನ್ನುವ ಪದವನ್ನ ಶಬ್ದಕೋಷದಿಂದ ಅಳಿಸಿ ಹಾಕಿದರೂ ಬಹುಶಃ ಏನೂ ಆಶ್ಚರ್ಯವೆನಿಸುವುದಿಲ್ಲವೇನೋ…

  4. I completly agree with u Ranju .cholo maadi baradde ..nanu sumaru 5 sala mane change madiddi ..prati salanu hinge kandiddu nanaguva . .. hinge sagtu namm jeevana 🙂


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: