ಮಗು

ಮನೆಯಲ್ಲಿರುವವರು ನಾವಿಬ್ಬರೇ
ಆದರೆ ನಮಗಿಬ್ಬರಿಗೂ ಒಂದೊಂದು ಮಗುವಿದೆ
ನನಗೆ ನನ್ನ ಮಗುವಿನ ಮೇಲೆ ಅತ್ಯಂತ ಪ್ರೀತಿ
ನನ್ನವರಿಗೆ ಅವರ ಮಗುವಿನ ಮೇಲೆ ಅಪಾರ ಮಮತೆ

ತನ್ನ ಮರಿ ಹೊನ್ನ ಮರಿ ಎಂಬಂತೆ
ನನ್ನ ಮಗುವೆ ನನಗೆ ಎಲ್ಲರಿಗಿಂತ ಆಕರ್ಷಕ
ನನ್ನವರಿಗೆ ಅವರ ಮಗುವೆ ಬಲು ಸುಂದರ
ಒಟ್ಟಾರೆ ಎರಡು ಮಕ್ಕಳು ಚೆನ್ನವೇ

ನನ್ನ ಮಗು ತುಸು ದೊಡ್ಡದು
ಶಾಂತ ಸ್ವಭಾವ, ಹಠ, ತೀಟೆ ಬಹಳ ಕಮ್ಮಿ
ಅದು ಬೇಕು ಇದು ಬೇಕು ಎಂಬ ಹಠವಿಲ್ಲ
ಇಸೆಕ್ರೀಂ, ಚಾಕ್ಲೇಟ್ ಬೇಕೆಂದು ಎಂದೂ ಕಾಡಿಲ್ಲ

ನನ್ನವರ ಮಗುವೊ ತುಸು ಚಿಕ್ಕದು
ಶುದ್ದ ತಲೆ ಹರಟೆ, ಆಟ, ತೀಟೆ ಎಲ್ಲ ಜಾಸ್ತಿ
ಬೇರೆ ವಸ್ತುಗಳು ಬೇಕೆಂಬ ರಗಳೆ ಇಲ್ಲದೇ ಇದ್ರು
ಇಸೆಕ್ರೀಂಗಾಗಿ ಯಾವಾಗ್ಲೂ ಕಾಟ

ನನ್ನ ಮಗು ಬಹು ಬೇಗ ದುಃಖ ಪಡುವುದಿಲ್ಲ
ಅತಿಯಾದ ಸಂತೋಷವನ್ನು ವ್ಯಕ್ತಪಡಿಸುವುದಿಲ್ಲ
ಅಸಮಾಧಾನ, ಸಿಟ್ಟು, ಎಲ್ಲ ಬಹಳ ಕಮ್ಮಿ
ಸುಖ ದುಃಖ ಸಮೆಕ್ರತ್ವ ಎಂಬಂತೆ ಎಲ್ಲವೂ ಸಮಾನ ಅದಕ್ಕೆ

ನನ್ನವರ ಮಗುವಿಗೆ ಸ್ವಲ್ಪ ಬೇಜಾರಾದರೂ ದುಃಖ ಉಕ್ಕಿ ಬರುತ್ತದೆ
ಸಂತೋಷವಾದರೆ ಕುಣಿದು ಕುಪ್ಪಳಿಸುತ್ತದೆ
ಸಿಟ್ಟು ಬಂದರೆ ಅಸಮಾಧಾನವಾದರೆ ಗುಮ್ಮನೇ ಕುಳಿತಿರುತ್ತದೆ
ಎಲ್ಲ ಭಾವನೆಗಳನ್ನು ಬೇರೆ ಬೇರೆ ತರದಲ್ಲಿ ಅನುಭವಿಸುವ ಸ್ವಭಾವ ಅದಕ್ಕೆ

ನನ್ನ ಮಗು ಘಟನೆ ಕಹಿ ಇರಲಿ ಸಿಹಿ ಘಟನೆ ಇರಲಿ
ಎಲ್ಲವನ್ನು ಬೇಗ ಮರೆತುಬಿಡುತ್ತದೆ
ಯಾರ ಬಗೆಗೂ ಸಿಟ್ಟು ದ್ವೇಷ ಇಲ್ಲ
ಆದದ್ದು ಆಯಿತು ಎಂದು ಎಲ್ಲವನ್ನು ಮರೆತು ಬಿಡುವುದು ಈ ಮಗುವಿನ ಮನಸ್ಸು

ನನ್ನವರ ಮಗುವಿಗೆ ನೆನಪಿನ ಶಕ್ತಿ ಹೆಚ್ಚು
ಬಹಳ ಕಹಿ ಅಥವಾ ಬಹಳ ಸಿಹಿ ಘಟನೆಗಳನ್ನು ಬೇಗ ಮರೆಯುವುದಿಲ್ಲ
ದ್ವೇಷ ಸಾಧಿಸುವ ಸ್ವಭಾವ ಇಲ್ಲದೇ ಹೋದರು
ನೋವಿನ ಬರೆ, ಸಂತೋಷದ ಗೆರೆಗಳನ್ನು ಬೇಗ ಮರೆಯದು ಈ ಮಗುವಿನ ಹೃದಯ

ನನ್ನ ಮಗು ಮನೆಯಲ್ಲಿದ್ದರು ಅದರ ಪಾಡಿಗೆ ಅದು
ತನ್ನ ಲೋಕದಲ್ಲಿ, ತನ್ನ ಕೆಲಸದಲ್ಲಿ ಮುಳುಗಿರುತ್ತದೆ
ಅದನ್ನು ಸುಧಾರಿಸುವ ಕಷ್ಟ ಇಲ್ಲ, ಬುಧ್ಧಿ ಹೇಳುವ ಗೋಜ಼ಿಲ್ಲಾ
ತೀಟೆ ಮಾಡದೇ ಸುಮ್ಮನೇ ಕೂತಿರು ಎಂದು ಹೆದರಿಸುವ ಕೆಲಸವಿಲ್ಲ

ನಮ್ಮವರ ಮಗು ಅವರು ಮನಯಲ್ಲಿದ್ದರೆ ತೀಟೆ ಮಾಡುತ್ತಲೇ ಇರುತ್ತದೆ
ಅದರ ಕೆಲಸಗಳ ಮಧ್ಯ ನಮ್ಮವರಿಗೊಂದಿಷ್ಟು ಕಾಟ ಕೊಡುತ್ತಾ ಇರುತ್ತದೆ
ತರಲೆ ಮಕ್ಕಳಿಗಿರುವ ಎಲ್ಲ ಗುಣಗಳು, ಅಭ್ಯಾಸಗಳು ಇದಕ್ಕಿವೆ
ಕೆಲವೊಮ್ಮೆ ಸುಮ್ಮನೇ ಕೂರಿಸಲು ಗದರಿಸುವ, ಮುದ್ದಿನಿಂದ ಹೇಳುವ ಅವಶ್ಯಕತೆ ಇದೆ

ಹಬ್ಬ ಹರಿದಿನಗಳು, ಜನುಮದಿನಗಳಂತಹ ಸಂದರ್ಭಗಳಲ್ಲಿ
ತುಂಬಾ ಸಂಭ್ರಮ, ಸಡಗರ ವ್ಯಕ್ತಪಡಿಸುವುದು ನನ್ನವರ ಮಗು
ನನ್ನವರ ಮಗುವಿನ ಸಂತಸವನ್ನು ನೋಡಿ ಖುಷಿ ಪಡುವುದು ನನ್ನ ಮಗು
ನನ್ನ ಮಗು ಸನ್ಯಾಸಿಯಾಗಬೇಕಿತ್ತು ಎಂದು ಒಮ್ಮೊಮ್ಮೆ ನನ್ನ ತಮಾಷೆ

ಮಗು ಮಗು ಎಂದು ಹೇಳಿ ಮಗು ಯಾರೆಂದು ಹೇಳಬೇಕಲ್ಲ
ಮನೆಯಲ್ಲಿರುವ ಇಬ್ಬರಲ್ಲಿ ನನಗೆ ನನ್ನವರು ಮಗು
ನನ್ನವರಿಗೆ ನಾನೇ ಮಗು
ಈಗ ಹೇಳಿ ನಿಮಗ್ಯಾವ ಮಗು ಇಷ್ಟ ಎಂದು.

baby-2

Published in: on ಮೇ 6, 2009 at 4:14 AM  Comments (9)  

The URI to TrackBack this entry is: https://ranjanahegde.wordpress.com/2009/05/06/%e0%b2%ae%e0%b2%97%e0%b3%81/trackback/

RSS feed for comments on this post.

9 ಟಿಪ್ಪಣಿಗಳುನಿಮ್ಮ ಟಿಪ್ಪಣಿ ಬರೆಯಿರಿ

 1. ಗದ್ಯದ ಫ್ಲೇವರ್ ತುಸು ಹೆಚ್ಚೇ ಇದೆ ಅನ್ನಿಸಿದರೂ ಕೊನೆ ಪಂಚ್ ಮಾತ್ರ ಸೂಪರ್.

  ತುಂಬಾ ದಿನ ನೆನಪಲ್ಲುಳಿಯುವ ಬರಹ.

  ನಿಮ್ಮವರ ಮಗೂಗೆ ಸ್ವಲ್ಪ ಬುದ್ಧಿ ಹೇಳಿ; ಹಾಗೆ ಐಸ್ ಕ್ರೀಮ್ ಮೆಲ್ಲೋದು ಅಷ್ಟು ಒಳ್ಳೇದಲ್ಲ..;)

  • ಧನ್ಯವಾದಗಳು ರಂಜೀತ್ ಅವರೇ,
   ಮೊದಲು ನಾನು ಇದನ್ನು ಗದ್ಯದ ರೂಪದಲ್ಲೇ ಬರೆಯೋಣ ಅಂದುಕೊಂಡಿದ್ದೆ. ಆಮೇಲೆ ಇದನ್ನು ಬದಲಾವಣೆ ಮಾಡಿ ಪದ್ಯದ ರೂಪ ಕೊಡೋಣ ಅನ್ನಿಸಿತು( ಗದ್ಯಕ್ಕಿಂತ ಇದನ್ನು ಪದ್ಯವಾಗಿ ಬರೆದರೆ ಚೆನ್ನ ಅಂತ ). ಪ್ರಾಸಗಳು ಅಷ್ಟಾಗಿ ಇಲ್ಲದ ಕಾರಣ ಗದ್ಯದ ಪ್ರಭಾವ ಕಾಣಿಸುತ್ತಿದೆಏನೋ.
   ನನ್ನವರ ಮಗೂಗೆ ಬುಧ್ಧಿ ಹೇಳಿ ಎಲ್ಲ ಆಯ್ತು. ಆದ್ರೆ ಇಸೆಕ್ರೀಂ ಅಂದ್ರೆ ಆ ಮಗೂಗೆ ಬಹಳ ಬಹಳ ಇಷ್ಟ. ಏನು ಮಾಡೋದು?

 2. ಪದ್ಯ ಚೆನ್ನಾಗಿದೆ. ನನಗೆ ಎರಡು ಮಕ್ಕಳು ಇಷ್ಟವಾದರು. ಎರಡು ಸೇರಿ ಒಂದಾಗುವುದೇ ಪ್ರಕೃತಿಯ ನಿಯಮವಿರಬೇಕು.

  • ಬಾಲ ಅವರೇ,
   ಎರಡೂ ಮಕ್ಕಳನ್ನು ಇಷ್ಟ ಪಟ್ಟಿದ್ದಕ್ಕೆ ಧನ್ಯವಾದಗಳು. ನೀವು ಹೇಳಿದಂತೆ ಎರಡು ಮಕ್ಕಳು ಒಂದಾಗಿ ಬಾಳುತ್ತಿವೆ. ಹೀಗೆ ನನ್ನ ಬರಹಗಳನ್ನು ಓದಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತೀರಿ ಎಂದು ಅಶಿಸಿದ್ದೇನೆ.

 3. ತುಂಬಾನೇ ಚೆನ್ನಾಗಿದೆ.
  ಓದುತ್ತಾ ಹೋದಂತೆ ಖುಷಿ ಪಟ್ಟೆ.
  ಮೊದಲೇ ಹೇಳಿರುವಂತೆ ನಿಮ್ಮ ಬರಹದಲಿ ಸೆಳೆತವಿದೆ.
  -ಆಸು ಹೆಗ್ಡೆ.

  • Thank u asu avare.

 4. ಚೆನ್ನಾಗಿದೆ ಕಣ್ರಿ, ನನಗೆ ಎರಡೂ ಮಕ್ಕಳು ಹಿಡಿಸಿದವು..

  -ಶೆಟ್ಟರು

  • ನನ್ನ ಬ್ಲಾಗಿನ ಅಂಗಳಕ್ಕೆ ಭೇಟಿಕೊಟ್ಟು ಮಕ್ಕಳನ್ನು ಇಷ್ಟ ಪಟ್ಟಿದ್ದಕ್ಕೆ ಧನ್ಯವಾದಗಳು shetre

   Regards
   Ranjana

 5. ಈ ಎರಡೂ ಮಕ್ಕಳಿಲ್ಲದಿದ್ದರೆ ಪ್ರಪಂಚ ಮುನ್ನಡೆಯ ಬೇಕಲ್ಲ? ಹಾಗಾಗಿ ಎರಡೂ ಮಕ್ಕಳೂ ಶ್ರೇಷ್ಠ..
  ನಿಮ್ಮವರ ಮಗುವಿನಲ್ಲಿ ತುಸು ತುಂಟತನ ಇಲ್ಲದೇ ಇದ್ದಲ್ಲಿ, ನಮಗೆಲ್ಲ ಈ ರೀತಿಯಾದ ಮನಃ ತಣಿಸುವ
  ಮನರಂಜನೆ ಸಿಗುತ್ತಿತ್ತೇ ಹೇಳಿ ನೋಡೊಣ??… [;-)]


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: