ಹಬ್ಬ

ಹಬ್ಬ

ಹುಟ್ಟಿ ಇಷ್ಟು ವರ್ಷಗಳ ವರೆಗೂ ಪ್ರತಿ ವರ್ಷ ಎಲ್ಲ ಹಬ್ಬಗಳನ್ನೂ ನಮ್ಮ ದೇಶದಲ್ಲೇ, ಅದರಲ್ಲೂ ಹಳ್ಳಿಯ ಸಂಪ್ರದಾಯದಲ್ಲಿ ಆಚರಿಸೋದನ್ನ ನೋಡಿದ್ದೇನೆ ಮತ್ತು ಆಚರಿಸಿದ್ದೇನೆ. ಅದನ್ನು ಬಿಟ್ಟು ಕೆಲವೊಮ್ಮೆ ಬೆಂಗಳೂರಿನಲ್ಲಿ ಆಚಿರಿಸಿದ್ದುಂಟು. ಆದ್ರೆ ಈ ವರ್ಷದ ದೀಪಾವಳಿ, ಗಣೇಶ ಚತುರ್ಥಿ ಇಂತಹ ಮುಖ್ಯ ಹಬ್ಬಗಳನ್ನ ನಮ್ಮ ಹಬ್ಬಗಳ ವಾತಾವರಣ ಇಲ್ಲದಂತಹ ವಿದೇಶದಲ್ಲಿ ಆಚರಿಸಿದ್ದೇನೆ.

ಮೊದಲಿಂದಲೂ ನನಗೆ ನಮ್ಮ ಹಬ್ಬಗಳ ಆಚರಣೆ, ಪೂಜೆ, ಆ ಸಡಗರದ ವಾತಾವರಣ ಇವೆಲ್ಲ ತುಂಬಾ ಇಷ್ಟ. ಶಹರಗಳಲ್ಲಿ ಕೆಲವರು ( ಸಮಯದ ಅಭಾವ ಇರೋರು ) ಹಬ್ಬದ್ ದಿನ ಮನೆಯಲ್ಲಿ ಏನೂ ಮಾಡದೇ ಸುಮ್ನೇ ದೇವಸ್ಥಾನಕ್ಕೆ ಹೋದಹಾಗೆ ಮಾಡಿ, ಹೊಟೆಲ್ ಗೆ ಹೋಗಿ ಬೇಕಾಗಿದ್ದು ತಿಂದು ಮನೆಗೆ ಹೋದ್ರೆ ಅಲ್ಲಿಗೆ ಹಬ್ಬ ಮುಗೀತು ಅಂತ ಯಾರೋ ಹೇಳೋದು ಕೇಳಿದ್ದೆ. ಈ ತರದ ಹಬ್ಬದ್ ಆಚರಣೆಯ ಬಗ್ಗೆ ನನಗೆ ಒಂಥರ ವಿರೋಧ ಭಾವನೆ. ಒಂದು ಹಬ್ಬ ಕೂಡ ಚೆನ್ನಾಗಿ ಮನೇಲಿ ಆಚರಿಸೋಕಾಗಲ್ವೇ ಅನ್ನೋ ಫೀಲಿಂಗ್.

ಈ ವರ್ಷ ಹಬ್ಬಗಳ ಸಾಲು ಬಂದಾಗ ಹಬ್ಬಕ್ಕೆ ಉುರಿಗೆ ಬರುವುದು ಸಾಧ್ಯವಿಲ್ಲದ ಮಾತು ಅನ್ನುವುದು ಗೊತ್ತಿರುವ ಸತ್ಯವಾಗಿತ್ತು. ನೆಂಟರು, ಬಂಧುಗಳು ಯಾರೂ ಇರದ, ನಮ್ಮ ಉುರಿನ ತರಹ ಹಬ್ಬದ್ ವಾತಾವರಣ ಇಲ್ಲದ ಜಾಗಡಲ್ಲ್ಲಿ ಹೇಗೆ ಹಬ್ಬದ್ ಆಚರಣೆ ಮಾಡೋದು ಅಂತ ಯೋಚನೆ ಶುರು ಆಯ್ತು. ಹೊರಗೆ ಎಲ್ಲೂ ಹಬ್ಬದ್ ವಾತಾವರಣ ಇಲ್ಲ, ಮನೇಲಿ ನಾವಿಬ್ರೇ ಏನು ಮಾಡೋದು, ನಮ್ಮನೆಗೆ ಹಬ್ಬಕ್ಕೆ ಬನ್ನಿ ಅಂತ ಕರೆಯೋರು ಯಾರು ಇಲ್ಲ್ಲ ಕನ್ನಡ ಸಂಘದವರು, ಆವ್ರು ಇವ್ರು ಎಲ್ಲ ಸಂಘಗಳಲ್ಲಿ ಸಾರ್ವತ್ರಿಕ ಹಬ್ಬಗಳ ಆಚರಣೆ ಅಂತ ಒಂದು ದಿನ ಮಾಡ್ತಾರೆ, ಆದ್ರೆ ಅದಕ್ಕೆ ಸನ್‌ಡೇ ಬರ್ಬೇಕು. ಹಾಗಾಗಿ ಹಬ್ಬದ್ ದಿನ ಏನು ಮಾಡೋದು ಅಂತ ಮನೆಯಲ್ಲಿ ವಿಚಾರ ವಿನಿಮಯ ಮಾಡಿಕೊಂಡು ಅಂತೂ ಒಂದು ನಿರ್ಧಾರಕ್ಕೆ ಬಂದಾಯ್ತು.

ಚೌತಿ ಹಬ್ಬದ್ ದಿನ ಕೆಲವು ಆಫೀಸಿಗೆ ರಜೆ ಇಲ್ಲದ ಕಾರಣ ಮಧ್ಯಾಹ್ನ ನಾವೇ ಮನೇಲಿ ಹಬ್ಬ ಮಾಡಿದ್ವಿ. ಹೂವು, ಗರಿಕೆ ಎಲ್ಲ ತಂದು ದೇವರ ಪೂಜೆ ಆಯ್ತು, ಬೆಳಿಗ್ಗೇನೇ ಸ್ನಾನ ಮಾಡಿ ಮೋದಕ, ಕಾರ್ಜಿಕಾಯಿ, ಉಂಡೆ, ಚಕ್ಕುಲಿ, ಎಲ್ಲ ಮಾಡಿ ಅಡುಗೆ ಆಯ್ತು. ರಾತ್ರಿ ಉಟಕ್ಕೆ ಇಬ್ಬರು ಸ್ನೇಹಿತರನ್ನು ಕರೆದು, ಎಲ್ಲ ಸೇರಿ ಉಟ ಮಾಡಿದಾಗ ಒಂಥರ ಹಬ್ಬ ಆಚರಿಸಿದ ತೃಪ್ತಿ.
ದೀಪಾವಳಿ ಬಂದಾಗ ಆಪೀಸಿಗಳಿಗೆ ರಜೆ ಇದ್ದ ಕಾರಣ ಯೋಜನೆಯನ್ನು ಸ್ವಲ್ಪ ಬದಲಾಯಿಸಿ ೮-೧೦ ಜನ ಸ್ನೇಹಿತರನ್ನು ಮಧ್ಯಾಹ್ನ ಮನೆಗೆ ಕರೆದು, ಮನೆಯಲ್ಲಿ ಪೂಜೆ, ಕೆಲವು ಅಡಿಗೆ ಎಲ್ಲ ಮಾಡಿ ( ಉುರಿನ್ ಹಾಗೆ ಎಲ್ಲ ಅಡಿಗೆಯನ್ನು ಅಷ್ಟು ಜನರಿಗೆ ಮನೆಯಲ್ಲಿ ಮಾಡುವುದು ಸಾಧ್ಯವಾಗಲಿಲ್ಲ ಹಾಗಾಗಿ ಕೆಲವು ಮನೆಯಲ್ಲಿ ಮಾಡಿ ಕೆಲವು ಹೊಟೆಲ್ ಖಾದ್ಯಗಳನ್ನು ತಂದು) ಉಟ ಮಾಡಿ ಮುಗಿಸಿದ್ವಿ. ಸಯಾಂಕಾಲ ಒಂದಿಬ್ಬರು ಸ್ನೇಹಿತರ ಜೊತೆ ದೇವಾಸ್ತನಕ್ಕೆ ಹೋಗಿ ಬಂದು, ರಾತ್ರಿ ಪಟಾಕಿ ( ಸುರುಸುರುಬತ್ಟಿ ಮಾತ್ರ)ಸಿಡಿಸಿ,ಮನೆಯಲ್ಲಿ ದೀಪ ಹಚ್ಚಿ, ಉಟ ಮಾಡಿ ಮುಗಿಸಿದಾಗ ಆದ ಆನಂದ, ಸಮಾಧಾನ, ಹೊಟೆಲ್ ಗೆ ಹೋಗಿ ತಿಂದು ಬಂದರೆ ಸಿಗಲಾರದು ಅಂತ ಅನ್ನಿಸಿತು.ಮನೆಗೆ ಬಂದವರೆಲ್ಲ ಹಬ್ಬದ್ ಆಚರಣೆ ತುಂಬಾ ಚೆನ್ನಾಗಿ ಆಯ್ತು, ಎಂಜಾಯ್ ಮಾಡಿದ್ವಿ, ನಮಗೂ ಹಬ್ಬ ಆಚರಿಸಿದ ಹಾಗೆ ಆಯ್ತು ಅಂದಾಗ ಇನ್ನಷ್ಟು ಖುಷಿ.

ನಾವೆಲ್ಲೇ ಇದ್ದರೂ, ಹಬ್ಬದ್ ವಾತಾವರಣ ಇಲ್ಲದೇ ಹೋದರೂ ಆ ಸಡಗರವನ್ನು ನಾವೇ ಸೃಷ್ಟಿಸಬಹುದು, ಹಬ್ಬದ ಆಕರಣೆಯ ಆನಂದವನ್ನು ಪಡೆಯಬಹುದು ಅನ್ನೋ ಸತ್ಯವನ್ನು ನಾವು ಕಂಡುಕೊಂದ್ವಿ. ಜೊತೆಗೆ ಇನ್ನೂ ಮುಂದೆ ಕೆಲವೊಂದು ಹಬ್ಬವನ್ನಾದ್ರೂ ಹೀಗೆ ಆಚರಿಸೋಣ ಅಂತ ಪ್ಲಾನ್ ಕೂಡ ಹಾಕಿಕೊಂಡ್ವಿ. ನಾವೆಲ್ಲೇ ಇದ್ರು ನಮ್ಮ ದೇಶ, ಸಂಸ್ಕೃತಿಯ ಪ್ರತೀಕವಾದಂತಹ ನಮ್ಮ ಹಬ್ಬಗಳನ್ನು ಮರೆಯಲಿಕ್ಕ್ಕಾದೀತೆ? ಅವುಗಳ ಆಚರಣೆಯನ್ನು ಬಿಡಲಿಕ್ಕದೀತೇ? ಆ ಸಾಂಪ್ರದಾಯಿಕ ಹಬ್ಬಗಳ ಆಚರಣೆಯೇ ಒಂದು ಚಂದ ಅಲ್ಲವೇ?

Published in: on ಡಿಸೆಂಬರ್ 6, 2008 at 4:43 ಅಪರಾಹ್ನ  Comments (9)  

The URI to TrackBack this entry is: https://ranjanahegde.wordpress.com/2008/12/06/%e0%b2%b9%e0%b2%ac%e0%b3%8d%e0%b2%ac/trackback/

RSS feed for comments on this post.

9 ಟಿಪ್ಪಣಿಗಳುನಿಮ್ಮ ಟಿಪ್ಪಣಿ ಬರೆಯಿರಿ

 1. Hora deshadalli naavu maaDuva habbada Acharane uppu huli kaara enoo illada sappe adigeyantiruttade hegdeyavare.Akasmaath Nanage Newyork nalli flushingnalliruva Ganeshana dEvastaanadalli tumbaa chennada habbada vaataavaran anubhavisuva avakaasha sikkitu. Adru namma oorinalli maaDuva habbada majaane Bere.

  • ಹೌದು ಸಂಪತ್ ಅವರೇ, ನಮ್ಮ ಉರಲ್ಲಿ ಆಚರಿಸುವಹಬ್ಬದ ತರಹ ಹಬ್ಬ ಸಿಗುವುದಿಲ್ಲ, ಆದರೆ ದೀಪಾವಳಿ, ಗಣೇಶ ಚೌತಿ ಅಂತಹ ಹಬ್ಬಗಳನ್ನೂ ನಾನು ಯುಗಾದಿಯಂತೆ ನಮ್ಮ ಭಾರತೀಯ ಪದ್ದತಿಯಂತೆ ಆಚರಿಸಲು ಯತ್ನಿಸಿದ್ದೇನೆ. ಯುಗಾದಿಯಂದು ಇತರರಿಗೆ ಆಪೀಸು ಇದ್ದ್ಡ ಕಾರಣ ಯಾರನ್ನು ಕರೆಯಲಾಗಲಿಲ್ಲ. ಉಳಿದ 2 ನಮ್ಮ ಮುಖ್ಯ ಹಬ್ಬಗಳಲ್ಲಿ ಮನೆಗೆ ಕೆಲವರು ಅತಿಥಿಗಳನ್ನು ಕರೆದು,ಸಾಂಪ್ರದಾಯಿಕ ತಿನಿಸುಗಳನ್ನು ತಯಾರಿಸಿ, ಪೂಜೆ ಮಾಡಿ, ಎಲ್ಲರೂ ಸೇರಿ ಹಬ್ಬ ಅಚರಿಸಿದ್ದೆವೆ. ಪೂರ್ತಿ ನಮ್ಮ ಉರಿನ ಹಬ್ಬದನ್ತಿರದೆ ಹೋದರು ಇದ್ದಲ್ಲಿಯೇ ಹಬ್ಬದ ವಾತಾವರಣ ಸೃಷ್ಟಿಸಲು ಯತ್ನಿಸಿದ್ದೇನೆ. ಹಬ್ಬಕ್ಕೆ ಉರಿಗೆ ಹೋಗಲಿಕ್ಕಾಗದ ಕಾರಣ ಇದರಲ್ಲಿಯೇ ಸಂತೋಷ ಕಾಣಲು ನನ್ನಿಂದಾದ ಪ್ರಯತ್ನ ಅಷ್ಟೇ.

  • ತಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ಅತಿಥಿಗಳಿಗೆ ನಮ್ಮ ಮನೆಯಲ್ಲಿ ಸ್ವಾಗತ ಯಾವತ್ತೂ ಇರುತ್ತದೆ. ತಾವು ಎಂದಾದರೂ, ಯಾವುದಾದರೂ ಹಬ್ಬಕ್ಕೆ ನಮ್ಮ ಮನೆಗೆ ಬನ್ನಿ, ಹಬ್ಬ ಆಚರಿಸೋಣ. ಹೋಳಿಗೆ ಕೊಟ್ಟು ಕಳಿಸಲಿಕ್ಕಾಗುವುದಿಲ್ಲವಲ್ಲ ಏನು ಮಾಡುವುದು? ಎಂದಾದರೊಮ್ಮೆ ಸವಿಯಬಹುದು…

 2. thanks. You have sent me an email for further communication. Unfortunately i am an illiterate, so far as the computer utilisation is concerned. I can only type in Baraha ,and i call my son who is a soft wear man , to post it. I am just trying to learn a bit about the Ganaka yantra.or vidyunmaana yantra. i will be in touch with you Convey my enquiries to our family members. wishing you alll the best.
  sincerely yours
  sampath sakaleshpura

  • ತಮಗೆ ಕನ್ನಡ ಬರೆಯುವುದಕ್ಕೆ ಒಂದು ಸರಳ ದಾರಿ ಹೇಳುತ್ತೇನೆ. ತಮ್ಮ ಮಗ ನಿಗೂ ತಿಳಿದಿರಬಹುದು. ಇಂಟರ್‌ನೆಟ್ ಎಕ್ಸ್ ಪ್ಲೋರರ್ ಓಪನ್ ಮಾಡಿ ಅದರಲ್ಲಿ http://quillpad.com/kannada/ ಈ ಅಡ್ರೆಸ್ಸ್ ಹಾಕಿದರೆ ಅದರಲ್ಲಿ ನೀವು ಕನ್ನಡವನ್ನು ಬರೆಯಬಹುದು.
   ಸ್ವಲ್ಪ ಟಿಪ್ಸ್ ಹೇಳುತ್ತೇನೆ…
   ನಾನು ಅಂತ ಬರೆಯುವುದಕ್ಕೆ nanu ಅಂತ ಟೈಪ್ ಮಾಡಬೇಕು
   ಸ್ವಲ್ಪ -swalpa
   ಹೀಗಿದ್ದಲ್ಲಿ- heegiddalli
   ಪ್ರತಿಯೊಂದು- pratiyondu
   ಹೀಗೆ ನೀವು ಸ್ವಲ್ಪ ಬರೆಯುತ್ತಾ ಹೋದಂತೆ ಅಭ್ಯಾಸವಾಗುತ್ತದೆ…ಪ್ರಯತ್ನಿಸುತ್ತೀರಿ ಎಂದು ತಿಳಿದಿದ್ದೇನೆ.
   ಖಂಡಿತವಾಗಿ ನಮ್ಮ ಮನೆಯವರಿಗೆ ನಿಮ್ಮ ವಿಶ್ ತಿಳಿಸುತ್ತೇನೆ.

   ರಂಜನಾ

 3. ರಂಜನಾ ಹೆಗ್ಡೆಯವರಿಗೆ ನಮಸ್ಕಾರಗಳು. ನೀವು ಈಗ ನನಗೆ ಕ0ಪ್ಯೂಟರ್ ಗುರು. ನಿಮ್ಮಿ0ದ ತುಂಬಾ ಉಪಕಾರವಾಯಿತು.ಇದನ್ನು ನಾನೇ ಬೆರಳಚ್ಚು ಮಾಡಿ ಕಳಿಸುತ್ತಿದ್ದೇನೆ. ಇನ್ನೂ ಮೇಲೆ ಎಲ್ಲ ಹಬ್ಬಕ್ಕೂ ನಿಮ್ಮ ಮನೆಗೆ ಹಾಜರ್. ನನ್ನ ಶ್ರೀಮೆತಿ ಸುಧಾಸಂಪತ್ ರವರಿಗೂ ಈ ಬರಹವನ್ನು ಕಳಿಸಿಕೊಟ್ಟು ಆಕೆ ನಿಮ್ಮೊಡನೆ ಸಂಪರ್ಕ ಇಟ್ಟು ಕೊಳ್ಳುವಂತೆ.ಹೇಳುತ್ತೇನೆ. ನನ್ನ ಲೇಖನಗಳು ಆಗಾಗ್ಯೆ ದಟ್ಸ್ ಕನ್ನಡ ದಲ್ಲಿ
  ಪ್ರಕಟವಾಗುತ್ತಿರುತ್ತವೆ. ಲಿಂಕ್ ಕಳಿಸಿಕೊಡುತ್ತೇನೆ. ಈಗ ಇಲ್ಲಿನ ವಸಂತ ಋತುವಿನ ಚಿತ್ರವನ್ನು ಕಳಿಸಿಕೊಡುತ್ತಿದ್ದೇನೆ. ನಿಮ್ಮ ಯಜಮಾಣರಿಗೆ ನನ್ನ ನಮಸ್ಕಾರವನ್ನು ತಿಳಿಸುವುದು.
  ಇಂತಿ ತಮ್ಮ ಶ್ರೇಯೋಭಿಲಾಷಿ
  ಸಂಪತ್ ಸಕಲೇಶಪುರ.

 4. i like your blog, simple and truthfull,

  • Thank u Latheef..

 5. ಅಕ್ಕಾ ನಂಗೆ ಹಿಂಗೆಲ್ಲ ಬರ್ಯೂಲ್ ಆಗ್ತು ಹೇಳಿ ಗೊತ್ತೇ ಇಲ್ಲ್ಯಾಗಿತ್ತು….ಮಜಾ ಆಗ್ತು…ಧನ್ಯವಾದಗಳು….ಭಾರತದಲ್ಲಿ ಹಬ್ಬ ಮಾಡೀದಿನ್‌ಗೆ ಎಲ್ಲೂ ಮಾಡ್‌ತ್ವಿಲ್ಲೆ. ಶ್ರಾವಣ ಬನ್ದರ್ನ್ತು ಮುಗತ್ತು,,,,ದಿನಾ ಹಬ್ಬ…ನಮ್ಮ ದೇಶನ ಮೀಸ್ಸ್ ಮಾಡ್ಕಾತ್ಟಾ ಇದ್ರನ ಅಲ್ದ???ನಿಮಗೆ ಹಾಗೂ ಮನೆಯವರಿಗೆ ಶ್ರಾವಣ ಮಾಸದ ಶುಭಾಶಯಗಳು…

  ಅಮರ್


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: